ಬಂಟ್ವಾಳ: ಇಲ್ಲಿನ ನಗರ ನೈರ್ಮಲ್ಯ ಮತ್ತು ಹೊಸ ಪರಿವರ್ತನೆಗಾಗಿ ಬಿಜೆಪಿಗೆ ಮತ ಎಂಬ ಘೋಷಣೆಯೊಂದಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಜೊತೆಗೆ ವೈಜ್ಞಾನಿಕ ಮಾದರಿಯಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆ ನಡೆಸಲು ಪುರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಹೇಳಿದ್ದಾರೆ.

23btl-Bjp
ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಬಿಜೆಪಿ ವತಿಯಿಂದ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪುರಸಭೆ ವ್ಯಾಪ್ತಿಯ ಮಲಿನಗೊಂಡ ನೀರು ನೇತ್ರಾವತಿ ನದಿ ಒಡಲು ಸೇರದಂತೆ ತಡೆಯುವ ನಿಟ್ಟಿನಲ್ಲಿ ಸಮಗ್ರ ಒಳಚರಂಡಿ ವ್ಯವಸ್ಥೆ ಅನುಷ್ಠಾನ, ನೀರು ಸಂಸ್ಕರಣಾ ಘಟಕ ಮತ್ತು ಸಾರ್ವಜನಿಕ ಉದ್ಯಾನವನ, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ, ಪ್ಲಾಸ್ಟಿಕ್‍ಮುಕ್ತ ಪುರಸಭೆ, ಗ್ರಾಮಸಭೆ ಮಾದರಿ ವಾರ್ಡು ಸಭೆ ನಡೆಸುವ ಮೂಲಕ ಹಸಿರು ಪರಿಸರ ನಿರ್ಮಿಸುವುದಾಗಿ ಭರವಸೆ ನೀಡಿದರು. ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್ ಅಳವಡಿಕೆಗೆ ಕಡಿವಾಣ, ಹೋರ್ಡಿಂಗ್ ಮುಕ್ತ ಪುರಸಭೆ, ವಾಹನ ಪಾರ್ಕಿಂಗ್ ವ್ಯವಸ್ಥೆ, ಪುರಸಭೆ ಆದಾಯ ಹೆಚ್ಚಿಸುವ ಯೋಜನೆಗೆ ಚಾಲನೆ, ಬಿ.ಸಿ.ರೋಡ್ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಎದುರು ಸುರಕ್ಷಿತ ಸಂಚಾರಕ್ಕೆ ವೃತ್ತ ನಿರ್ಮಾಣ, ಪುರಸಭೆಯ ವಿವಿಧ ಭಾಗಗಳಲ್ಲಿ ಸಿಸಿಕ್ಯಾಮರಾ ಅಳವಡಿಕೆ, ಕಾನೂನು ಸುವ್ಯವಸ್ಥೆ ಮತ್ತಿತರ ಭರವಸೆ ಪ್ರಣಾಳಿಕೆಯಲ್ಲಿ ನೀಡಲಾಗಿದೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಅಭ್ಯರ್ಥಿಗಳಾದ ಎ. ಗೋವಿಂದ ಪ್ರಭು, ಬಿ.ದಿನೇಶ್ ಭಂಡಾರಿ, ಪುಷ್ಪರಾಜ ಶೆಟ್ಟಿ, ಮಹೇಶ್ ಶೆಟ್ಟಿ, ಪ್ರಮುಖರಾದ ರಾಮ್‍ದಾಸ್ ಬಂಟ್ವಾಳ, ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ಜಿನರಾಜ ಕೋಟ್ಯಾನ್, ಪುರುಷೋತ್ತಮ ಶೆಟ್ಟಿ, ರಂಜಿತ್ ಮೈರ, ಸೀತಾರಾಮ ಪೂಜಾರಿ ಮತ್ತಿತರರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *