ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಶನ್ ದ.ಕ – ಉಡುಪಿ ಜಿಲ್ಲೆ – ಬಂಟ್ವಾಳ ವಲಯದ ವತಿಯಿಂದ 179 ನೇ ವಿಶ್ವ ಛಾಯಗ್ರಹಣ ದಿನದ ಅಂಗವಾಗಿ ವಿಟ್ಲದ ಹಿರಿಯ ಛಾಯಗ್ರಾಹಕ ಮೋಹನ್ ಕೊಡಂಗಾಹಿ ಇವರನ್ನು ಅವರ ಮನೆಯಲ್ಲಿ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷರಾದ ಹರೀಶ್ ಮಾಣಿ ಗೌರವ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳ ಕಾರ್ಯದರ್ಶಿ ರೋಶನ್ ಕಲ್ಲಡ್ಕ ಕೋಶಾಧಿಕಾರಿ ಬಾಲಕೃಷ್ಣ ಉಪಾಧ್ಯಕ್ಷರುಗಳಾದ ರವಿ ಕಲ್ಪನೆ ,ಹರೀಶ್ ಕುಂದರ್ ,ರಾಜರತ್ನ ಮೆಲ್ಕರ್ , ಸಲಹಾ ಸಮಿತಿ ಸದಸ್ಯರಾದ ಜಯರಾಮ್ ಕಲ್ಲಡ್ಕ , ಹರೀಶ್ ನಾಟಿ , ವಿಜಯ ಬಾಳ್ತಿಳ ,ಮೋಹನ್ ವಿಟ್ಲ ,ಕಿರಣ್ ವಿಟ್ಲ ,ಆನಂದ್ ಪೆರುವಾಯಿ, ವರುಣ್ ಕಲ್ಲಡ್ಕ, ವಿಕೇಶ್ ಬಂಟ್ವಾಳ, ಸೌವ್ಯಾಸಚಿ ಗೌಡ, ಹಾಗೂ ವಲಯದ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.
