ಸುದ್ದಿ9ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಕೆಲವೊಂದು ಉಪನ್ಯಾಸಕರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆಗ್ರಹಿಸಿ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಸೋಮವಾರವೂ ಮತ್ತೆ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿದರ್ೇಶಕರ ತಂಡವು ಭೇಟಿ ನೀಡಿದೆ.
ಇಲ್ಲಿನ ಉಪನ್ಯಾಸಕರಾದ ತೇಜಸ್ವಿನಿ ಮತ್ತು ಉಪ ಪ್ರಾಂಶುಪಾಲ ಡಾ.ಎಚ್.ಸಿ.ಚಿನ್ನಗಿರಿ ಗೌಡ ಇವರು ವಿದ್ಯಾಥರ್ಿಗಳನ್ನು ನಿಂದಿಸಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಎಬಿವಿಪಿ ಸಂಘಟನೆ ವಿದ್ಯಾಥರ್ಿಗಳು ಆರೋಪಿಸಿ ನಗರ ಪೊಲೀಸ್ ಠಾಣೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ದೂರಿಕೊಂಡು ಕಳೆದ ಗುರುವಾರದಿಂದ ಪ್ರತಿಭಟನೆ ಆರಂಭಿಸಿದ್ದರು.
ಇಲಾಖೆ ಜಂಟಿ ನಿದರ್ೇಶಕ ಶ್ರೀಕಾಂತ್, ಸಹಾಯಕ ನಿದರ್ೇಶಕ ಜಯರಾಜ್ ನೇತೃತ್ವದ ತಂಡವು ಸೋಮವಾರ ಆಗಮಿಸಿ, ಪ್ರತಿಭಟನಾಕಾರರು ಮತ್ತು ಪ್ರಾಂಶುಪಾಲ ಕೆ.ಸುನಿಲ್ ಇವರೊಂದಿಗೆ ಮಾತುಕತೆ ನಡೆಸಿ ವಿದ್ಯಾಥರ್ಿಗಳು ತರಗತಿ ಬಹಿಷ್ಕರಿಸದಂತೆ ಸೂಚಿಸಿ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ ಬಳಿಕ ತೆರಳಿದ್ದಾರೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

