ನವದೆಹಲಿ: ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ಆಗಸ್ಟ್ 9ರಂದು ಚುನಾವಣೆ ನಡೆಸುವುದಾಗಿ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ಆ.6 ಸೋಮವಾರದಂದು ತಿಳಿಸಿದ್ದಾರೆ.

ಪಿ.ಜೆ ಕುರಿಯನ್ ಅವರು ಜು.1ರಂದು ರಾಜ್ಯಸಭಾ ಉಪ ಸಭಾಪತಿ ಸ್ಥಾನದಿಂದ ನಿವೃತ್ತಿ ಪಡೆದುಕೊಂಡಿದ್ದರು. ನಂತರ ಆ ಸ್ಥಾನ ಖಾಲಿಯಾಗಿತ್ತು. ಇದೀಗ ಮುಂಗಾರು ಅಧಿವೇಶನ ಕೊನೆಯ ಎರಡನೇ ದಿನದಂದು ಚುನಾವಣೆ ನಡೆಸಲಾಗುವುದು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
