ಬಂಟ್ವಾಳ: ಕಲ್ಲಡ್ಕ ವಲಯದ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಘಟಕ ವತಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಯಾಗಬೇಕು. ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಹಾಗೂ ಅಖಂಡ ಭಾರತ ಸಂಕಲ್ಪ ದೊಂದಿಗೆ ಕಲ್ಲಡ್ಕ ಶ್ರೀ ರಾಮಮಂದಿರದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ಮಿದಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಕಾಲ್ನಡಿಗೆಯಲ್ಲಿ ತೆರಳುವ ಮುನ್ನ ಕಲ್ಲಡ್ಕ ಶ್ರೀ ರಾಮ ಭಜನಾ ಮಂದಿರ ದಲ್ಲಿ ಭಜನೆ ನಡೆಸಿ ಬಳಿಕ ವಿಶೇಷ ಪೂಜೆ ಸಲ್ಲಿಸಿ ರಾತ್ರಿ ಒಂಬತ್ತು ಗಂಟೆಯ ವೇಳೆಗೆ ಕಾಲ್ನಡಿಗೆಯಲ್ಲಿ ಹೊರಟರು. ನೂರೈವತ್ತಕ್ಕೂ ಅಧಿಕ ಕಾರ್ಯಕರ್ತರು ಈ ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಿಶ್ಬಹಿಂದೂ ಪರಿಷತ್ ಪ್ರಖಂಡ ಅಧ್ಯಕ್ಷ ಕಾ.ಕ್ರಷ್ಣಪ್ಪ, ಸಂಚಾಲಕ ನವೀನ್ಮಾಪಲ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಕಾರ್ಯನಿರ್ವಾಹಕ ಸುಜಿತ್ ಕೊಟ್ಟಾರಿ , ಮತ್ತಿತರರು ಹಾಜರಿದ್ದ ರು.

