ದಿನದಿಂದ ದಿನಕ್ಕೆ ಚಿತ್ರರಂಗದಲ್ಲಿ ಒಂದಲ್ಲಾ ಒಂದು ಹೊಸ ಪ್ರಯೋಗಗಳು ನಡೆಯುತ್ತಲೇ ಇದೆ. ತಾಜಾತನ ಹಾಗೂ ಮಾನವೀಯ ಕಥನ ಹೊಂದಿರುವ ರಾಮಾ ರಾಮಾ ರೇ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದ ನಿದೇರ್ಶಕ ಡಿ ಸತ್ಯ ಪ್ರಕಾಶ್. ಇವರ ಈ ಚಿತ್ರದ ಯಶಸ್ಸನ್ನು ಕಂಡು ಇದೀಗ ಹೊಸ ಕಥೆಯನ್ನು ಪ್ರೇಕ್ಷಕರ ಮುಂದೆ ಇಡಲು ಮುಂದಾಗಿದ್ದಾರೆ. ಅವರ ಮೊದಲ ಚಿತ್ರದಲ್ಲಿ ಇದ್ದಂತಹ ಭರವಸೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಮುಂದಾಗಿರುವ ಹೊಸ ಚಿತ್ರವೇ ‘ಒಂದಲ್ಲಾ ಎರಡಲ್ಲಾ’.

ondalla yeradalla
ಎಲ್ಲಾ ಚಿತ್ರಗಳು ಪ್ರಮೋಷನ್ ಕೊಡುವುದು ರೀಲಿಸ್‍ಗೂ ಮುನ್ನದ ಪೋಸ್ಟರ್ ಬಿಡುಗಡೆ. ಆದರೆ ಈ ಚಿತ್ರ ತಂಡ ಹೊಸ ರೀತಿಯಲ್ಲಿ ತಮ್ಮ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ ಪೋಸ್ಟರ್‍ನಲ್ಲಿ ಉದ್ದಬಾಲ, ದೊಡ್ಡ ಕಿವಿಗಳ ಬಾಲಕನ ಆಕೃತಿ ಇರುವ ಪೋಸ್ಟರ್ ಕುತೂಹಲ ಹುಟ್ಟಿಸಿತ್ತು. ಅದಾದ ನಂತರ ಇನ್ನೂ ಹೊಸ ರೀತಿಯ ಪ್ರಚಾರಕ್ಕೆ ನಿಂತ ತಂಡ ಜನರಲ್ಲಿ ಇನ್ನಷ್ಟು ಕುತೂಹಲ ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡುತ್ತಿದೆ. ಈ ಚಿತ್ರದ ಮುಖ್ಯ ಸೂತ್ರ ‘ಮನರಂಜನೆಯ ಜತೆಗೆ ಮಾಹಿತಿ’. ಈ ಶೀರ್ಷಿಕೆಯ ಕುರಿತಾಗಿ ವಿಶೇಷ ಕುತೂಹಲಕಾರಿ ಮಾಹಿತಿ ನೀಡಲಾಗುತ್ತಿದೆ. ಈ ತಂಡ ಕೇವಲ ಚಿತ್ರ ಪ್ರಚಾರವಲ್ಲದೇ ಹೊಸ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ತನ್ನ ಪಾತ್ರವಹಿಸಿದೆ. ‘ಒಂದಲ್ಲಾ ಎರಡಲ್ಲಾ ಸತ್ಯಸಂಗತಿ’ ಎಂಬ ಶೀರ್ಷಿಕೆಯಡಿಯಲ್ಲಿ ‘ಹಲ್ಮಿಡಿ ಶಾಸನದಲ್ಲಿರುವ ಕನ್ನಡ ಪದಗಳ ಸಂಖ್ಯೆ 20’ ಎಂಬ ಮಾಹಿತಿ ಹೊರಹಾಕಿದೆ. ಇದರ ನಂತರ ‘ಕರ್ನಾಟಕದಲ್ಲಿರುವ ಹಳ್ಳಿಗಳ ಸಂಖ್ಯೆ ಒಂದಲ್ಲಾ ಎರಡಲ್ಲಾ ಬದಲಾಗಿ 29406 ಎಂದು ತಿಳಿಸಿದೆ. ಕೇವಲ ಮಾಹಿತಿಯಲ್ಲದೇ ಅದರ ಪೋಸ್ಟರ್‍ಗಳು ಕೂಡ ಗಮನಸೆಳೆದಿದೆ.
ಸಾಮಾನ್ಯವಾಗಿ ಸಿನೆಮಾ ಎಂದರೆ ಆಡಿಯೋ ರಿಲೀಸ್, ಟ್ರೈಲರ್ ರಿಲೀಸ್, ಟೀಸರ್ ರಿಲೀಸ್ ಎಂದು ಪ್ರಚಾರ ಮಾಡುತ್ತಾರೆ. ಆದರೆ ಈ ತಂಡ ಇದಕ್ಕಿಂತ ಹೊಸದಾಗಿ ಏನಾದರೂ ಮಾಡಬೇಕು ಎಂದುಕೊಂಡಿದೆ. ಮಗುವಿನ ಮುಗ್ಧ ಮನಸ್ಸನ್ನು ಬಿತ್ತಿಗೊಳಿಸುವ ಚಿತ್ರವಾಗಿದ್ದು, ಮಕ್ಕಳಿಗೆ ಮತ್ತು ಹಿರಿಯರಿಗೆ ಇದೊಂದು ಹೊಸ ವಿಷಯಗಳನ್ನು ಕೊಡುವ ನಿಟ್ಟಿನಲ್ಲಿ ಈ ರೀತಿಯ ಪ್ರಚಾರಕ್ಕೆ ಮುಂದಾಗಿದ್ದೇವೆ ಎಂದು ಚಿತ್ರದ ನಿರ್ದೇಶಕ ಡಿ. ಸತ್ಯಪ್ರಕಾಶ್ ಹೇಳಿದ್ದಾರೆ.
ನಮ್ಮ ಸಮಾಜದಲ್ಲಿ ಸುದ್ದಿಗಳನ್ನು ಕೇವಲ ಸಿನೆಮಾ ಪ್ರೀಯರು ಮಾತ್ರ ತಿಳಿದುಕೊಳ್ಳುತ್ತಾರೆ. ಈ ಹೊಸ ಪ್ರಯತ್ನದಿಂದ ಇತರರು ಕೂಡ ಈ ಚಿನೆಮಾ ನೋಡುವಂತಾಗಲಿ ಎಂಬುದು ಈ ತಂಡದ ಉದ್ದೇಶ. ಒಂದಲ್ಲಾ ಎರಡಲ್ಲಾ ಇಂತಹ ಹಲವು ಕುತೂಹಲ ಹುಟ್ಟಿಸುವ ಈ ಚಿತ್ರ ಆಗಷ್ಟ್ ತಿಂಗಳಲ್ಲಿ ಈ ಚಿತ್ರ ತೆರೆಯ ಮೇಲೆ ಮೂಡಿ ಬರಲಿದೆ.

By suddi9

Leave a Reply

Your email address will not be published. Required fields are marked *