ಬಂಟ್ವಾಳ: ರೈತ ಸಂಘ ಹಸಿರು ಸೇನೆ ಬಂಟ್ವಾಳ ಮತ್ತು ತುಂಬೆ ಡ್ಯಾಂ ಸಂತ್ರಸ್ತ ರೈತ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯಭಟ್ ಅವರನ್ನು ಮಂಗಳೂರು ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಇದರ ಫರಂಗಿಪೇಟೆ ಶಾಖಾ ಉದ್ಘಾಟನಾ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸ್ಮರಣಿಕೆ ನೀಡಿ ಗೌರವಿಸಿದರು.
ಪುದು ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಮಂಗಳೂರು ದ.ಕ.ಜಿಲ್ಲಾ ಹಾಲು ಉತ್ಪಾಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಸ್ಕ್ಯಾಡ್ಸ್ ಉಪಾಧ್ಯಕ್ಷ ಸಿ.ಆಶೋಕ್ ಕುಮಾರ್ ಶೆಟ್ಟಿ , ಕಾರ್ಯದರ್ಶಿ ಕಾಶೀನಾಥ್ ಬಿ. ಉಪಸ್ಥಿತರಿದ್ದರು.

