ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಉಕ್ಕುಡ ಒಕ್ಕೂಟದ ಪೂಜಾಶ್ರೀ ಜೆ ಎಲ್ ಜೆ ಸಂಘವು ಒತ್ತೆಸಾರಿನಲ್ಲಿ ಉದ್ಘಾಟನೆಗೊಂಡಿತು. ಸಂಘದ ಪ್ರಬಂಧಕರಾಗಿ ಪ್ರಶಾಂತ್, ಸಂಯೋಜಕರಾಗಿ ಕಿರಣ್ ವಿ ಮತ್ತು ಕೋಶಾಧಿಕಾರಿಯಾಗಿ ಶಿವರಾಮ ಇವರು ಆಯ್ಕೆಗೊಂಡರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಟ್ಲ ವಲಯ ಮೇಲ್ವಿಚಾರಕಿ ಪ್ರೇಮ ಶುಭಹಾರೈಸಿದರು. ಉಕ್ಕುಡ ಒಕ್ಕೂಟದ ಅಧ್ಯಕ್ಷ ಜಗನ್ನಾಥ, ಸೇವಾ ಪ್ರತಿನಿಧಿ ಹೇಮಲತಾ ಚಿದಾನಂದ, ಕಾರ್ಯದರ್ಶಿ ಕಾವೇರಿ, ಜತೆಕಾರ್ಯದರ್ಶಿ ದಯಾನಂದ ಕೆ, ಕೋಶಾಧಿಕಾರಿ ಆನಂದಿ, ನಿಕಟಪೂರ್ವ ಅಧ್ಯಕ್ಷ ಉದಯಕುಮಾರ್ ಮತ್ತು ಉಪಾಧ್ಯಕ್ಷೆ ಜಲಜಾಕ್ಷಿ ಉಪಸ್ಥಿತರಿದ್ದರು.
ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಗಿಡಗಳನ್ನು ವಿತರಿಸಲಾಯಿತು. ಸದ್ಯರಾದ ಶಿವ ಆಚಾರ್ಯ, ವೆಂಕಪ್ಪ ನಾಯ್ಕ, ಕುಂಞ ಗೌಡ, ಹರೀಶ್ ವಿ, ಅನಿಸಿಕೆ ವ್ಯಕ್ತಪಡಿಸಿದರು. ಪರಮೇಶ್ವರ ಎಸ್ ಸ್ವಾಗತಿಸಿದರು. ಚಿದಾನಂದ ವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
