ಬಂಟ್ಟಾಳ,ಆ.31: ದಿನಾಂಕ ಸೆ. 03 ರಂದು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣವು ನಡೆಯಲಿದೆ. 2014 ಜನಾದೇಶ ಒಂದು ವಿಶ್ಲೇಷಣೆ ಎಂಬ ವಿಷಯವನ್ನಾಧರಿಸಿ ಅದರ ಹಿನ್ನೆಲೆ, ಪ್ರಭಾವ, ಮುನ್ನೆಲೆ ಎಂದು ಮೂರು ಹಂತದಲ್ಲಿ ಚರ್ಚೆ ನಡೆಯಲಿದೆ.
ಕಾರ್ಯಕ್ರಮವನ್ನು ಬೆಳಗ್ಗೆ 9.45 ಕ್ಕೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಖ್ಯಾತ ಅಂಕಣಕಾರ ಪ್ರತಾಪಸಿಂಹ ಉದ್ಘಾಟಿಸಿ ಜನಾದೇಶದ ಹಿನ್ನೆಲೆ ಎಂಬ ವಿಷಯದ ಕುರಿತು ಮಾತನಾಡಲಿರುವವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ ವಹಿಸಲಿದ್ದು, ಸಂಸ್ಥೆಯ ಸಂಚಾಲಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಸ್ತಾವಿಕ ಮಾತುಗಳಾನ್ನಾಡಲಿರುವರು.
ಗಂಟೆ 12:00ಕ್ಕೆ ಆರಂಭವಾಗುವ ಜನಾದೇಶದ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವ ಎಂಬ ವಿಷಯದ ಎರಡನೇ ಅವಧಿಯನ್ನು ಸಾಫ್ಟ್ವೇರ್ ತಂತ್ರಜ್ಞರು ಹಾಗೂ ಸಾಮಾಜಿಕ ಜಾಲತಾಣದ ಸಕ್ರಿಯ ಕಾರ್ಯಕರ್ತ ಬೆಂಗಳೂರಿನ ಕಿರಣ್ ಕೆ.ಎಸ್ ನಡೆಸಿಕೊಡುವರು.
2:00 ಗಂಟೆಯಿಂದ ಆರಂಭವಾಗುವ ಪರಿವರ್ತನೆಯ ರಾಜಕಾರಣ ಮುಂದಿರುವ ಸವಾಲುಗಳು ವಿಷಯದ ಮೂರನೇ ಅವಧಿಯನ್ನು ಶಾಸಕರು ಹಾಗೂ ಮಾಜಿ ಕಾನೂನು ಹಾಗೂ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ನಡೆಸಿಕೊಡುವರು. ಎಲ್ಲಾ ಅವಧಿಗಳ ಬಳಿಕ ಮುಕ್ತ ಚರ್ಚೆಗೆ ಅವಕಾಶವಿದೆ.
ಕಾರ್ಯಕ್ರಮದ ಸಮಾರೋಪ ಭಾಷಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರ ವಿಭಾಗ ಪ್ರಮುಖ್ ವಾದಿರಾಜ್ ಮಾಡಲಿರುವರು ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
