ಸುರತ್ಕಲ್: ಸರತ್ಕಲ್ ಸಮೀಪದ ಚೇಳಾರಿನ ಭವ್ಯ ಎಂಬ ಯುವತಿಯನ್ನು ಉಪ್ಪಳದ ರಾಜೇಶ್ ಎಂಬ ಯುವಕ ಭಾನುವಾರ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಭವ್ಯ ಎಂಬ ಯುವತಿಯು ಹುಟ್ಟಿನಿಂದಲೇ ಮೂಗಿಯಾಗಿದ್ದು ಕಿವಿ ಸಹ ಕೇಳಿಸುತ್ತಿರಲಿಲ್ಲ ಆದರು ಉಪ್ಪಳ ನಿವಾಸಿ ರಾಜೇಶ ಎಂಬತಾ ಭವ್ಯಳಿಗೆ ಬಾಳು ಕೊಡಲು ಮುಂದೆ ಬಂದು ಅದರ್ಶ ಮೆರೆದರು. ಈ ಸರಳ ಮದುವೆಯ ಎಲ್ಲ ವೆಚ್ಚವನ್ನು ಊರವರು ಮತ್ತು ದಾನಿಗಳು ಭರಿಸಿದ್ದರು.

