ಬಂಟ್ವಾಳ:ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ನೀಡುವ ಪರಿಹಾರ ಧನ ತೀರಾ ಹಳೆಯ ಮಾದರಿಯಲ್ಲಿದ್ದು, ಇದನ್ನು ಕೂಡಲೇ ಹೆಚ್ಚಳಗೊಳಿಸಬೇಕು ಎಂಬ ನಾಗರಿಕರ ಆಗ್ರಹಿಸಿದ ಘಟನೆ ನಡೆದಿದೆ.

15btl-Gramasabhe
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಷರೀಪ್ ನಂದಾವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ. ತುಂಬೆ ಅಣೆಕಟ್ಟೆಯಲ್ಲಿ 6 ಮೀ. ನೀರು ಸಂಗ್ರಹದಿಂದ ಮುಳುಗಡೆಗೊಂಡ ಇಲ್ಲಿನ ಸಂತ್ರಸ್ತ ರೈತರಿಗೆ ಕೂಡಲೇ ನ್ಯಾಯೋಚಿತ ಪರಿಹಾರ ದೊರಕಿಸಿ ಕೊಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಂಡರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ನಸೀಮಾ ಸಹಿತ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಗ್ರಾಮಸ್ಥರಾದ ಎಂ.ಸುಬ್ರಹ್ಮಣ್ಯ ಭಟ್, ಪ್ರವೀಣ್ ಗಟ್ಟಿ , ಇಲ್ಯಾಸ್, ಮೊಹಮ್ಮದ್ ಬಶೀರ್, ಇಸ್ಮಾಯಿಲ್, ಗಂಗಾಧರ ನಾೈಕ್, ಮುಸ್ತಾಫಾ, ಉದಯ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಪಿಡಿಒ ಬಿ.ಪ್ರಕಾಶ್, ಕಾರ್ಯದರ್ಶಿ ಶಿವಗೊಂಡಪ್ಪ ಬಿರದಾರ, ನೋಡೆಲ್ ಅಧಿಕಾರಿ ಎಚ್.ಆರ್.ಲಸ್ರಾದೋ ಇದ್ದರು.

By Suddi9

Leave a Reply

Your email address will not be published. Required fields are marked *