ಮಂಗಳೂರು: ಖ್ಯಾತ ನಿರ್ದೇಶಕ ಅಭಯ ಸಿಂಹ ನಿರ್ದೇಶನದ, ಪ್ರಶಸ್ತಿ ವಿಜೇತ ತುಳು ಸಿನಿಮಾ `ಪಡ್ಡಾಯಿ’ ಜುಲೈ 13 ರಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಡುಗಡೆಗೊಳ್ಳಲಿದೆ.

 

Padayi Tulu Film
ಆಂಗ್ಲ ನಾಟಕಕಾರ ಶೇಕ್ಸ್ ಪಿಯರ್ ರಚಿಸಿದ `ಮ್ಯಾಕ್ಬೆತ್’ ನಾಟಕದಿಂದ ಪ್ರೇರಿತಗೊಂಡಿರುವ ಈ ಸಿನಿಮಾವನ್ನು ನಿತ್ಯಾನಂದ ಪೈ ನಿರ್ಮಿಸಿದ್ದು, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ನಿರ್ದೇಶಿಸಿದ್ದು, ವಿಷ್ಣು ಪ್ರಸಾದ್.ಪಿ ಛಾಯಾಗ್ರಹಣವಿದೆ. ರಾಷ್ಟ್ರೀಯ ಸಿನೆಮಾ ಪ್ರಶಸ್ತಿಗಳಲ್ಲಿ, ಅತ್ಯುತ್ತಮ ತುಳು ಸಿನೆಮಾ ಪ್ರಶಸ್ತಿ 2017, ಡಾಕ್ ಸ್ಕೂಲ್, ಕ್ಲಿನಿಕ್ ಖಟಮಂಡು ಬರವಣಿಗೆ ಕಾರ್ಯಾಗಾರ 2017, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ 2018, ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ 2018, ಇನ್ನೊವೇಟಿವ್ ಚಲನಚಿತ್ರೋತ್ಸವಕ್ಕೆ ಆಯ್ಕೆ 2018, ಮೆಲ್ಬೋರ್ನ್, ಆಸ್ಟ್ರೇಲಿಯಾ ಚಲನಚಿತ್ರೋತ್ಸವಕ್ಕೆ ಆಯ್ಕೆ 2018,ವಿಯನ್ನಾ ಆಸ್ಟ್ರೀಯಾ ಚಲನಚಿತ್ರೋತ್ಸವಕ್ಕೆ ಆಯ್ಕೆ 2018, ಹ್ಯಾಬಿಟಾಟ್ ಚಲನಚಿತ್ರೋತ್ಸವಕ್ಕೆ ಆಯ್ಕೆ 2018, ಜಾಗರಣ್ ಚಲನಚಿತ್ರೋತ್ಸವಕ್ಕೆ ಮನ್ನಣೆ ಪಡೆದಿರುವ `ಪಡ್ಡಾಯಿ’ ಕರಾವಳಿಯ ಚಿತ್ರಮಂದಿರದಲ್ಲಿ ಇನ್ನೆರಡು ದಿನಗಳಲ್ಲಿ ಮೂಡಲಿದ್ದು, ನಿರೀಕ್ಷೆಗಳನ್ನು ಹೆಚ್ಚಿಸಿದೆ.

By suddi9

Leave a Reply

Your email address will not be published. Required fields are marked *