ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ಕೇಂದ್ರದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ( ಇಸ್ರೊ)ಪೂರ್ವಾಧ್ಯಕ್ಷ ಎ. ಎಸ್. ಕಿರಣ್ ಜೂ. 25ರಂದು ದೀಪ ಬೆಳಗಿಸುವ ಉದ್ಘಾಟಿಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಯೋಜನೆಯ ಬಗ್ಗೆ ವಿದ್ಯಾಕೇಂದ್ರದಿಂದ ನೀಡುತ್ತಿರುಸ ಸಹಕಾರದ ಬಗ್ಗೆ ವಿವರಿಸಿದರು. ಕೇಂದ್ರ ಸರಕಾರದ ನೀತಿ ಆಯೋಗದ ಅಟಲ್ ಇನೋವೇಷನ್ ಮಿಷನ್ ಯೋಜನೆ ಅಡಿಯಲ್ಲಿ ಈ ಲ್ಯಾಬ್ ಸ್ಥಾಪನೆ ಆಗಿದೆ. ಈ ಶಾಲೆಯಲ್ಲಿರುವ ಮೂಲ ಸೌಕರ್ಯ, ವೈಜ್ಞಾನಿಕ ಚಟುವಟಿಕೆಗಳು, ಶಾಲೆಯ ಸಾಧನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನೀತಿ ಆಯೋಗವು ಯೋಜನೆಗಾಗಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರವನ್ನು ಆಯ್ಕೆ ಮಾಡಿತ್ತು ಎಂದರು.
6ರಿಂದ 12 ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕ್ಷೇತ್ರದ ಕುರಿತಾಗಿ ಕುತೂಹಲ ,ಆಸಕ್ತಿಯನ್ನು ಹೆಚ್ಚಿಸಿ ಉತ್ತೇಜಿಸುವುದು ಈ ಪ್ರಯೋಗಾಲಯದ ಮುಖ್ಯ ಆಶಯವಾಗಿದೆ.
ಜೊತೆಗೆ ಹೊಸ ಸಂಶೋಧನೆಗಳನ್ನು ಮಾಡುವ ಯುವ ವಿಜ್ಞಾನಿಗಳಿಗೆ ಅದಕ್ಕೆ ಪೂರಕ ಮಾಹಿತಿ, ಮಾರ್ಗದರ್ಶನ ನೀಡುವುದು, ವೈಜ್ಞಾನಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಪ್ರೇರೇಪಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಸೈನ್ಸ್ (ವಿಜ್ಞಾನ) ಟೆಕ್ನಾಲಜಿ (ತಂತ್ರಜ್ಞಾನ), ಎಂಜಿನಿಯರಿಂಗ್, ಮೆಥಮ್ಯಾಟಿಕ್( ಗಣಿತ) ವಿಷಯಗಳ ಜೊತೆಯಾಗಿ ಸ್ಟೆಮ್ ಹೆಸರಲ್ಲಿ ಮಕ್ಕಳ ಆಸಕ್ತಿ ಹೆಚ್ಚುವಂತೆ ಮಾಡುವ ಮೂಲ ಉದ್ದೇಶವನ್ನು ಈ ಯೋಜನೆ ಇರಿಸಿಕೊಂಡಿದೆ.ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 2500 ಚ.ಅ.ವಿಸ್ತೀರ್ಣದ ಕೊಠಡಿಯಲ್ಲಿ ಈ ಲ್ಯಾಬ್ ನಿರ್ಮಾಣ ಆಗಿದೆ. 3ಡಿ ಪ್ರಿಂಟರ್ಸ್, ರೋಬೋಟ್ಗಳು, 35ಕ್ಕೂ ಅ„ಕ ಸೆನ್ಸರ್ಗಳು, ಸೇರಿದಂತೆ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳು ಪ್ರಯೋಗ ಮಾಪನ ಸಾಮಾಗ್ರಿಗಳು ಇಲ್ಲಿ ಉಪಯೋಗಕ್ಕೆ ಲಭ್ಯವಾಗಲಿದೆ. ಯೋಜನೆಗೆ ಪೂರಕ ಸೌಕರ್ಯಗಳು ಇಲ್ಲಿರುವುದರಿಂದ ಈ ಕಾಲೇಜನ್ನು ಆಯ್ಕೆ ಮಾಡಲು ಕಾರಣವಾಗಿದೆ ಎಂದು ತಿಳಿಸಿದರು.
ವಾರದ ಆರು ದಿನ, ಪ್ರತೀ ದಿನ ಬೆಳಗ್ಗೆ 9ರಿಂದ ಸಂಜೆ 5ಗಂಟೆ ತನಕ, ದಿನಕ್ಕೆ 8 ಗಂಟೆಯಂತೆ ಈ ಲ್ಯಾಬ್ ಕಾರ್ಯ ನಿರ್ವಹಿಸುವುದು. ತಾಲೂಕಿನ ಯಾವುದೇ ಶಾಲೆಯ ವಿದ್ಯಾರ್ಥಿಗಳಿಗೆ ( 6-12 ತರಗತಿ) ಈ ಪ್ರಯೋಗಾಲಯದಲ್ಲಿ ವಿಜ್ಞಾನದ ವಿಚಾರದಲ್ಲಿ ಮಾಹಿತಿ ಪ್ರಯೋಗ ನಡೆಸಲು ಅವಕಾಶವಿದೆ. ಉದ್ಘಾಟನೆ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ರಾ.ಸ್ವ.ಸಂಘದ ದಕ್ಷಣ ಮಧ್ಯ ಕ್ಷೇತ್ರಿಯ ಸಂಪರ್ಕ ಪ್ರಮುಖ್ ಕೆ.ಎಸ್. ವೆಂಕಟೇಶ್ ಮೈಸೂರು, ಮುಂಬಯಿ ಚಾರ್ಟರ್ಡ್ ಅಕೌಂಟೆಟ್ ಎಂ.ಎನ್.ಶೆಟ್ಟಿ, ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಕ್ಷೇತ್ರ ಶಿಕ್ಷಣಾ„ಕಾರಿ ಶಿವಪ್ರಕಾಶ್, ವಿಷಯ ಪರಿವೀಕ್ಷಕ ರಾಧಾಕೃಷ್ಣ ಭಟ್, ಶಾಲಾ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಯನ್., ಉದಯ ವಿ. ಜಿ. ಬೆಂಗಳೂರು, ಸರ್ವೊತ್ತಮ ಬಾಳಿಗಾ, ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ಕಟ್ಟೆ ಸಹಿತ ಇತರರು ಉಪಸ್ಥಿತರಿದ್ದರು.
ತಾಲೂಕಿನ 60 ಶಾಲೆಗಳಿಂದ ವಿದ್ಯಾರ್ಥಿ ಶಿಕ್ಷಕರು ಪಾಲ್ಗೊಂಡಿದ್ದರು. ಗಣ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಉದ್ಘಾಟನೆ ಬಳಿಕ ಅಟಲ್ ಟಿಂಕರಿಂಗ್ ಲ್ಯಾಬ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
