23-5ಕೈಕಂಬ:ಒಂದು ಸಂಘ ಕಟ್ಟಿ ಬೆಳೆಸುವುದು ಕಷ್ಟ. ಈ ಸಂಘ ಕಳೆದ 14 ವರ್ಷದಿಂದ ಸತತ ಶಾಲಾ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಇತರ ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಸೇವೆಗೈಯುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರುವಿನ ತತ್ವದಡಿ ಕಾರ್ಯವೆಸಗುತ್ತಿರುವ ಈ ಸಂಘ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಎಂಎಲ್‍ಸಿ ಹರೀಶ್ ಕುಮಾರ್  ಹೇಳಿದರು.23-03

ಅವರು ಶನಿವಾರ ಕುಕ್ಕಟ್ಟೆಯ ಸಭಾಗೃಹದಲ್ಲಿ ಶ್ರೀ ವಿಜಯ ವಾಹಿನಿ ಗಂಜಿಮಠ ಇದರ 14ನೇ ವರ್ಷದ ಸ್ಥಳೀಯ ಕನ್ನಡ ಕಿರಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.23-8

ಸಮಾಜದಲ್ಲಿ ಬಡತನದಲ್ಲಿರುವ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿರುವ ಈ ಸಂಘ ಈವರೆಗೂ ಉತ್ತಮ ಕೆಲಸ ಮಾಡುತ್ತ ಬಂದಿದೆ. ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಹಿಂದಿನ ರಾಜ್ಯ ಸರ್ಕಾರ ಹಲವು ಯೋಜನೆ ಕೈಗೆತ್ತಿಕೊಂಡಿದೆ. ಇದರ ಲಾಭ ಪಡೆಯುವಲ್ಲಿ ಶ್ರೀ ವಿಜಯ ವಾಹಿನಿ ಮುಂಚೂಣಿಗೆ ಬರಬೇಕೆಂದು ಮಾಜಿ ಶಾಸಕ ಮೊೈದಿನ್ ಬಾವ ಹೇಳಿದರು.

23-02
ಶ್ರೀ ವಿಜಯ ವಾಹಿನಿ ಸಂಘವು ಈ ಪ್ರದೇಶಕ್ಕೆ `ವಿಜಯದ ಮೆಟ್ಟಿಲು’ ಆಗಲಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮೊಹಮ್ಮದ್ ಮೋನು ಶುಭಹಾರೈಸಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಹಾಗೂ ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ ಸಂದರ್ಭೋಚಿತ ಮಾತಾನಾಡಿದರು. ಅಣ್ಣಯ್ಯ ಭಟ್ ಸಂಘಕ್ಕೆ ದೇವರ ದಯೆ ಇರಲಿ ಎಂದು ಆಶೀರ್ವಚನ ನೀಡಿದರು.23-9

23-01

ಈ ಸಂದರ್ಭದಲ್ಲಿ ಗುರುಕಂಬ್ಳ ಎ.ಕೆ.ಯು ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಅಬ್ದುಲ್ ರೆಹಮಾನ್, ಮೊಗರು ಕುಕ್ಕಟ್ಟೆಯ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಸಹ ಶಿಕ್ಷಕಿ ಆಗ್ನೇಸ್ ಡಿ’ಮೆಲ್ಲೋ, ಹಾಗೂ ಉದ್ಯಮಿ ನಾರ್ಲ ಚಂದ್ರಹಾಸ ಶೆಟ್ಟಿಅವರನ್ನು ಸನ್ಮಾನಿಸಲಾಯಿತು. ಗಂಜಿಮಠ ಗ್ರಾಪಂ ವ್ಯಾಪ್ತಿಯ ಪರಿಶಿಷ್ಠ ಜಾತಿ ಮತ್ತು ಕೊರಗ ಜನಾಂಗದ ಪ್ರತಿಯೊಂದು ಮನೆಗೆ ಫೈಬರ್ ಕುರ್ಚಿ ವಿತರಿಸಲಾಯಿತು.23-6

23-7

ಮೊದಲಿಗೆ ವಿದ್ಯಾರ್ಥಿನಿ ಮೇಘನಾರಿಗೆ ಪುಸ್ತಕ ಹಾಗೂ ಕೊರಗ ಸಮಾಜದ ಮುತ್ತು ಮತ್ತು ಪರಿಶಿಷ್ಟ ಜಾತಿಯ ವೆಂಕಪ್ಪ ನಾಡಾಜೆ, ಮುತ್ತನ್ನಇವರಿಗೆ  ಫೈಬರ್ ಕುರ್ಚಿ ನೀಡಲಾಯಿತು. ಇದೇ ವೇಳೆ 10ನೇ ತರಗತಿಯಲ್ಲಿ ಶೇ 10 ಫಲಿತಾಂಶ ಪಡೆದ ಗುರುಕಂಬ್ಳ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಅಭಿನಂದಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಅರ್ಹ ಫಲಾನುಭವಿಗಳಿಗೆ ಫೈಬರ್ ಕುರ್ಚಿ ವಿತರಿಸಲಾಯಿತು.23-1

23-3

23-2ಶ್ರೀ ವಿಜಯ ವಾಹಿನಿ ಗಂಜಿಮಠದ ಅಧ್ಯಕ್ಷ ಜಿ ಸುನೀಲ್  ಸ್ವಾಗತಿಸಿ, ಪ್ರಸ್ತಾವಿಕ ಮಾತನ್ನಾಡಿದರು. ವೇದಿಕೆಯಲ್ಲಿ ಗಂಜಿಮಠ ವ್ಯವಸಾಯಸೇವಾ ಸಹಕಾರಿ  ಆಧ್ಯಕ್ಷ ಲೋಕಯ್ಯ ಕೊಟ್ಟಾರಿ, ಎಂ ಎ ರಜಾಕ್, ಗುರುಕಂಬ್ಳ ಎ .ಕೆಯು. ಶಾಲೆಯ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಗಂಗಮ್ಮ, ಜಯಾನಂದ ಕುಲಾಲ್, ದಯಾನಂದ ಪೂಜಾರಿ,   ಮಾಜಿ ಜಿಲ್ಲಾ ಪಂ. ಸದಸ್ಯ ಕೃಷ್ಣ ಅಮೀನ್ , ಗ್ರಾ. ಪಂ ಸದಸ್ಯ ಬೂಬ ಪೂಜಾರಿ ಮೊದಲಾದವರಿದ್ದರು. ಕೈಕಂಬ ಮಾಧವ ಮಯ್ಯ  ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *