ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿಯ ತೆಂಕುಳಿಪಾಡಿ ಗ್ರಾಮದ ಬಾಳೆಹಿತ್ಲು ಎಂಬಲ್ಲಿ ಗುರುವಾರ ವಿವಾಹಿತನೊರ್ವ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆನಡೆದಿದೆ.ಆತ್ಮಹತ್ಯೆಗೈದ ವೈಕ್ತಿಯನ್ನುಪುರಂದರ ಪೂಜಾರಿ (45) ಎಂದುಗುರುತಿಸಲಾಗಿದೆ.ಇವರ ಪತ್ನಿ ಅಸೌಖ್ಯದ ಕಾರಣದಿಂದ ಮಕ್ಕಳೊಂದಿಗೆ ತಾಯಿ ಮನೆಗೆ ಹೋಗಿದ್ದ ವೇಳೆ ಈಘಟನೆ ನಡೆದಿದೆ.
ಪುರಂದರ ಅವರು ಬುಧವಾರ ಮನೆ ಬಿಟ್ಟು ಹೋದವರು ಮನೆಗೆ ವಾಪಸ್ ಬಂದಿರಲಿಲ್ಲ ಗುರುವಾರ ಬೆಳಗ್ಗೆ ಮನೆಯ ಹತ್ತಿರದ ತೋಟದ ಬದಿಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದುದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತರು ವಿಪರೀತ ಕುಡಿತದ ಚಟ ಹೊಂದಿದ್ದುಇದರಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರ ಬಾವ ಕೃಷ್ಣಪೂಜಾರಿ ನೀಡಿದ ದೂರಿನ ಆಧಾರದಲ್ಲಿ ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
