ಉಡುಪಿ:ಜೇಸಿಐ ಉಡುಪಿ ಸಿಟಿ,ಲೋಂಬಾರ್ಡ್ ಮೆಮೋರಿಯಲ್‍ಆಸ್ಪತ್ರೆ(ಮಿಷನ್),ಬಡಗಬೆಟ್ಟುಕ್ರೆ.ಕೋ.ಅ ಸೊಸೈಟಿಉಡುಪಿ ಮತ್ತು ಆಳ್ವಸ್ ನ್ಯಾಚುರೋಪತಿಆಸ್ಪತ್ರೆಇದರ ವತಿಯಿಂದ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯಲ್ಲಿ ಬೃಹತ್‍ಯೋಗ ಶಿಬಿರ ಮತ್ತುಯೋಗ ದಿನಾಚರಣೆಕಾರ್ಯಕ್ರಮ ಜೂನ್21 ರಂದು ನಡೆಯಿತು.DSC_0286

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಿಷನ್‍ಆಸ್ಪತ್ರೆಯ ನಿರ್ದೇಶಕಡಾ|| ಸುಶೀಲ್ ಜತ್ತನ್‍ಯೋಗವು ಕೇವಲ ದೈಹಿಕ ಬೆಳವಣಿಗೆಗೆಅಲ್ಲದೆ ಮಾನಸಿಕ ಬೆಳವಣಿಗೆಗೆ ನಾಂದಿಯಾಗುತ್ತದೆ.ವಿಶ್ವದ ಹೆಚ್ಚಿನಎಲ್ಲಾರಾಷ್ಟದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆಇದು ನಮ್ಮ ಹೆಮ್ಮೆಯ ವಿಚಾರಎಂದರು.

ಬಡಗುಬೆಟ್ಟು ಸೊಸೈಟಿಯಜಿ.ಎಂಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ,ಯೋಗದಿಂದ ಹಲವಾರು ಕಾಯಿಲೆಗಳನ್ನು ದೂರಮಾಡುವ ಶಕ್ತಿಯಿದೆ.ಕೇವಲ ಒಂದು ದಿನದಲ್ಲಿಇದರ ಅನುಷ್ಠಾನ ನಡೆದರೆ ಸಾಲದು ದಿನದಲ್ಲಿ ಕನಿಷ್ಠ ಅರ್ದಗಂಟೆಯಾದರೂಇದಕ್ಕೆ ಮೀಸಲಿಟ್ಟು ನಮ್ಮಆರೋಗ್ಯಕಾಪಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿಡಾ|| ಗಣೇಶ್ ಕಾಮತ್,ಆಡಳಿತಾಧಿಕಾರಿ ಡೊನಾಲ್ಡ್ ಅಂಚನ್,ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಮೆನೆಜಸ್,ಹೆಲೆನ್ ಮಥಾಯಿಸ್,ಪ್ರೋಜೆಕ್ಟ್ ಮೆನೆಜರ್‍ರೋಲ್ಯಾಂಡ್ ಸಾಲಿನ್ಸ್,ಆಶಾ ನಿಲಯದಜಯವಿಜಯ ಆಳ್ವಸ್ ಕಾಲೇಜಿನಡಾ|| ಅಜುಮ್,ಸಿಟಿ ನರ್ಸಿಂಗ್ ಕಾಲೇಜಿನ ಪ್ರಾದ್ಯಾಪಕರು,ರೋಹಿ ರತ್ನಾಕರ್ ಮುಂತಾದವರಿದ್ದರು.ರಾಘವೇಂದ್ರ ಪ್ರಭುಕರ್ವಾಲುಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ 15 ದಿನಗಳ ಕಾಲ ಯೋಗತರಬೇತಿ ನೀಡಿದ ಸ್ವಾತಿ ಮತ್ತುಜುಬೇರ್‍ರವರಿಗೆ ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *