download

ಮಂಗಳೂರು: ಕೋಸ್ಟಲ್ ವುಡ್ ನ ಬಹು ನಿರೀಕ್ಷಿತ ಚಿತ್ರವೆಂದು ಬಿಂಬಿತವಾದ ಅಮ್ಮೆರ್ ಪೊಲೀಸಾ ಸಿನೆಮಾ ಜೂ.22 ರಂದು ತೆರೆ ಕಾಣಲಿದೆ.

ತುಳುವಿನ ಸ್ಟಾರ್ ಡೈರೆಕ್ಟರ್ ಎಂದು ಖ್ಯಾತಿ ಪಡೆದ ಸೂರಜ್ ಶೆಟ್ಟಿ ನಿರ್ದೇಶನದ ಅಮ್ಮೇರ್ ಪೊಲೀಸಾ ಸಿನೆಮಾದ ಟೀಸರ್ ಈ ಹಿಂದೆಯೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಹಸ್ರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅಮ್ಮೇರ್ ಪೊಲೀಸಾ ಸಿನಿಮಾಕ್ಕಾಗಿ ಕ್ರಿಕೆಟಿಗ ಎಸ್. ಶ್ರೀಶಾಂತ್ ಶುಭ ಹಾರೈಸಿದ್ದಾರೆ. ಚಿತ್ರ ಸೂಪರ್ ಹಿಟ್ ಆಗುವುದರಲ್ಲಿ ಸಂಶಯವಿಲ್ಲ ಎಂದು ಕನ್ನಡದಲ್ಲಿಯೇ ವಿಷ್ ಮಾಡಿ ಚಿತ್ರ ನೋಡುವಂತೆ ಹುರಿದುಂಬಿಸಿದ್ದಾರೆ.

ಅಮ್ಮೇರ್ ಪೊಲೀಸಾ ಚಿತ್ರ ಹಾಸ್ಯಕ್ಕಾಗಿ ಮತ್ತು ಕಡಿಮೆ ಬಜೆಟ್ ನಿರ್ಮಾಣವಾದ ಸಿನಿಮಾ ಎಂದೇ ಫೇಮಸ್ ಆಗಿದ್ದು ಲಕುಮಿ ಕ್ರೀಯೆಷನ್ ನಲ್ಲಿ ತಯಾರಾಗಿದೆ. ಚಿತ್ರದಲ್ಲಿ ನರಮಾನಿಯನ ಬೇನೆ ಅವು ಮುಗಿಯರ ಉಂಡಯೇ, ಎನ್ನುವ ಏಕೈಕ ಹಾಡು ಇದೆ.
ಚಿತ್ರದಲ್ಲಿ ರೂಪೇಶ್ ಶೆಟ್ಟಿ, ಪೂಜಾ ಶೆಟ್ಟಿ, ನಾಯಕ ನಾಯಕಿಯಾಗಿ ಅಭಿನಯಿಸಿದ್ರೆ, ಅರವಿಂದ್ ಬೋಳಾರ್, ವಿಸ್ಮಯ್ ವಿನಯಕ್ ಮೈಮ್ ರಾಮದಾಸ್ ಪ್ರಸನ್ನ ಶೆಟ್ಟಿ, ಬೈಲೂರು, ಸಂದೀಪ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಕುಸಲ್ದ ಅರಸೇ ನವೀನ್ ಡಿ ಪಡೀಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಲೂಯಿಸ್ ಕುತ್ತಾರ್ ಹಾಡು ಬರೆದಿದ್ದು, ಸಂದೀಪ್ ಬಲ್ಲಾಳ್ ಸಂಗೀತ ಸಂಯೋಜನೆ, ಸಚಿನ್ ಎಸ್ ಶೆಟ್ಟಿ ಕ್ಯಾಮೆರಾ ಕೈಚಳಕವಿದೆ.

 

By suddi9

Leave a Reply

Your email address will not be published. Required fields are marked *