ವಾಮಂಜೂರು: ಇಲ್ಲಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ನಾಯಕರು, ಮಂತ್ರಿಮಂಡಲದ ಸದಸ್ಯರು ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದರು.

gur-june-14-vidyajyothi-5

ಮಂತ್ರಿಮಂಡಲ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭ ದೀಪ ಬೆಳಿಗಿಸಿ ಉದ್ಘಾಟಿಸಲಾಯಿತು. ಬಳಿಕ  ಪ್ರೌಢಶಾಲೆಯ ವಿದ್ಯಾರ್ಥಿ ಮುಖಂಡ(ಎಸ್‍ಪಿಎಲ್) ರಾಬಿನ್ ಜೋಸೆಫ್ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮುಖಂಡ ಡೆರೆನ್ ಅರೆನ್ಹಾ ಹಾಗೂ ಇತರ ವಿದ್ಯಾರ್ಥಿ ನಾಯಕ-ನಾಯಕಿಯರು ಪ್ರಮಾಣ ವಚನ ಸ್ವೀಕರಿಸಿದರು. ಕಳೆದ ವಾರ ವಿದ್ಯಾರ್ಥಿ ನಾಯಕರ ಚುನಾವಣೆ ನಡೆದಿತ್ತು.

gur-june-14-vidyajyothi-1ಈ ಸಂದರ್ಭದಲ್ಲಿ ಸಂಸ್ಥೆಯ ಪಿಟಿಐ ಅಧಿಕಾರಿ ರೋಶನ್ ಕಾಮತ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನ್ಸಿಲ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ, ಕರೆಸ್ಪಾಂಡೆಂಟ್ ಸಿಸ್ಟರ್ ಜೋಯೆಲ್, ಫಾದರ್ ಅಂತೋನಿ ಪಾಯಸ್ ಇದ್ದರು.

gur-june-14-vidyajyothi-2

ಪ್ರಮಾಣ ವಚನ ಸ್ವೀಕರಿಸಿ ಮಾತಾಡಿದ ವಿದ್ಯಾರ್ಥಿ ಮುಖಂಡ ರಾಬಿನ್ ಜೋಸೆಫ್, “ನನಗೆ ಮತ ನೀಡಿದ ವಿದ್ಯಾರ್ಥಿಗಳಿಗೆಲ್ಲ ಅಭಿನಂದನೆ. ಶಾಲೆಯಲ್ಲಿ ಶಿಸ್ತು ಕಾಪಾಡುವಲ್ಲಿ ಶಿಕ್ಷಕ ವೃಂದದ ಜತೆ ಸೇರಿ ಕೆಲಸ ಮಾಡುವೆ” ಎಂದರು.

ವಿದ್ಯಾರ್ಥಿ ಮುಖಂಡ ಡೆರೆನ್ ಅರೆನ್ಹಾ  ಮಾತನಾಡಿ, “ಈ ಅವಕಾಶದೊಂದಿಗೆ ಶಾಲೆಯ ಏಳ್ಗೆಗೆ ನನ್ನಿಂದಾದಷ್ಟು ಪ್ರಯತ್ನಿಸುವೆ” ಎಂದು ಹೇಳಿದರು.

ಪ್ರತಿಕ್ಷಾ ಕಾರ್ಯಕ್ರಮ ನಿರೂಪಿಸಿದರು. ಸಿಸ್ಟರ್ ಅನ್ಸಿಲ್ಲಾ ವಿದ್ಯಾರ್ಥಿ ನಾಯಕರ ಹೆಸರು ವಾಚಿಸಿದರು. ಶಾಲಾ ಶಿಕ್ಷಕರ ವೃಂದ ಸಹಕರಿಸಿತು. ಶಾಲಾ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮ ಜರುಗಿತು.

gur-june-14-vidyajyothi-7

By suddi9

Leave a Reply

Your email address will not be published. Required fields are marked *