ಬಂಟ್ವಾಳ: ದುಷ್ಕರ್ಮಿಗಳ ತಂಡವೊಂದು ಯುವಕನೋವರ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕಲ್ಲಡ್ಕದಲ್ಲಿ ಸೋಮವಾರ ನಡೆದಿದೆ.
ಗಾಯಾಳನ್ನು ಚೇತನ್ ಮೆಲ್ಕಾರ್ ಎಂದು ಗುರುತಿಸಲಾಗಿದೆ.
ಚೇತನ್ ಇಂದಷ್ಟೇ ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಈ ಹಿನ್ನೆಲೆಯಲ್ಲಿ ಪೂರ್ವದ್ವೇಷದಿಂದ ತಂಡ ಹಲ್ಲೆ ನಡೆಸಿದೆ. ಗಾಯಾಳು ಚೇತನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಕಿರಣ್ ಮೆಲ್ಕಾರ್, ಯೋಗೇಶ್, ಮೋಹನ್, ಕೀರ್ತನ್, ಲೋಕೇಶ್, ಪ್ರಕಾಶ್, ವಿದ್ಯಾಧರ್ ಎಂಬವರ ತಂಡ ಹಲ್ಲೆ ನಡೆಸಿದೆ ಹೇಳಲಾಗಿದೆ.

