9btl-Eramale

ಬಂಟ್ವಾಳ: ತಾಲೂಕಿನಾದ್ಯಂತ ಶನಿವಾರ ಶೇ. 74.9ಮಿ.ಮೀ.ಮಳೆಯಾಗಿದ್ದು, ನೇತ್ರಾವತಿ ನದಿ ನೀರಿನ ಮಟ್ಟದ 3.8 ಅಡಿ ಏರಿಕೆ ಕಂಡಿದೆ. ತಾಲೂಕಿನ ಕಡೇಶ್ವಾಲ್ಯ ನಿವಾಸಿ ಪೂವಪ್ಪ ಪೂಜಾರಿ ಎಂಬವರ ಮನೆ ಮಾಡು ಹಾನಿಗೀಡಾಗಿದ್ದು, 15 ಸಾವಿರ ರೂ. ನಷ್ಟ ಸಂಭವಿಸಿದೆ. ಉಳಿದಂತೆ ಬಡಗಕಜೆಕಾರು ನಿವಾಸಿ ಜಯಪೂಜಾರಿ ಮನೆಗೆ 20ಸಾವಿರ ರೂ., ವಿಮಲ ಎಂಬವರ ಮನೆಗೆ 45 ಸಾವಿರ ರೂ., ಬೀಫಾತುಮ್ಮ ಮನೆಗೆ 60ಸಾವಿರ ರೂ. ಮೊತ್ತದ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಇಲ್ಲಿನ ವೀರಕಂಭ ನಿವಾಸಿ ಕಮಲ ನಾರಾಯಣ ಶೆಟ್ಟಿ ಎಂಬವರ ಮನೆಗೆ 15ಸಾವಿರ ರೂ., ಬೋಳಂತೂರು ಗ್ರಾಮದ ಸುರಿಬೈಲು ಅಂಗಡಿಮಾರು ನಿವಾಸಿ ಇಸ್ಮಾಯೀಲ್ ಎಂಬವರ ಮನೆ ಕುಸಿದು ಬಿದ್ದು 3ಲಕ್ಷ ಹಾನಿ ರೂ., ಕೊಳ್ನಾಡು ಗ್ರಾಮ ನಿವಾಸಿ ಮೊಹಮ್ಮದ್ ಎಂಬವರ ಮನೆಗೆ ರೂ 20ಸಾವಿರ, ಅಮ್ಮುಂಜೆ ಗ್ರಾಮದ ಕಲಾಯಿ ಎಂಬಲ್ಲಿ ಮನೆಯೊಂದಕ್ಕೆ 2ಸಾವಿರ ರೂ. ಮತ್ತು ತುಂಬೆ ಕೋರ್ದಬ್ಬು ದೈವಸ್ಥಾನ ಆವರಣ ಗೋಡೆ ಕುಸಿದು ಬಿದ್ದು ಹಾನಿಗೀಡಾಗಿದೆ.

ವಿಟ್ಲ ಕಸ್ಬಾ ಗ್ರಾಮದ ಪಾರ್ವತಿ ಮಲೆಯಪ್ಪ ಎಂಬವರ ಮನೆಗೆ 10ಸಾವಿರ ., ಜಯಂತಿಗಣೇಶ ಎಂಬವರ ಮನೆಗೆ 15ಸಾವಿರ ರೂ., ಬಾಲಕೃಷ್ಣ ಪೂಜಾರಿ ಎಂಬವರ ಮನೆ ಸಮೀಪದ ತಡೆಗೋಡೆ ಕುಸಿದು ಬಿದ್ದು 25ಸಾವಿರ ರೂ. ನಷ್ಟ ಸಂಭವಿಸಿದೆ.

ಬಂಟ್ವಾಳ ಕಸ್ಬಾ ಗ್ರಾಮದ ಕೃಷ್ಣ ಕಾಮತ್ ಎಂಬವರ ಮನೆಗೆ ರೂ 1ಲಕ್ಷ ರೂ., ದಾಮೋದರ ಕಾಮತ್ ಎಂಬವರ ಮನೆಗೆ 1ಲಕ್ಷ, ಜಯಪ್ರಕಾಶ ಕಾಮತ್ ಎಂಬವರ ಮನೆಗೆ 1ಲಕ್ಷ ರೂ., ವೀರಭಾಯಿ ಎಂಬವರ ಮನೆಗೆ 1.50ಲಕ್ಷ ರೂ. ಮೊತ್ತದ ಹಾನಿ ಸಂಭವಿಸಿದೆ ಎಂದು ಕಂದಾಯ ಇಲಾಖೆ ಕಚೇರಿ ಮೂಲಗಳು ತಿಳಿಸಿವೆ.

By Suddi9

Leave a Reply

Your email address will not be published. Required fields are marked *