ಶ್ರೀನಿವಾಸಪುರ: ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಘಟಾನುಘಟಿಗಳ ಪರಿಶ್ರಮ ಹಾಗು ರಾಜಕೀಯ ಹಾಗು ಶಿಕ್ಷಕರ ಪ್ರಯತ್ನದಿಂದ ಶೇ 94ರಷ್ಟು ಪೋಲೀಸ್ ಬಿಗಿ ಬಂದೋಬಸ್ತ್ ನಡುವೆ ಶಾಂತಿಯುತ ಮತದಾನವಾಗಿದೆ.
ಶ್ರೀನಿವಾಸಪುರ ತಾಲ್ಲೂಕು ಕಛೇರಿಯಲ್ಲಿ ಮತಗಟ್ಟೆ ವ್ಯವಸ್ಥೆ ಮಾಡಲಾಗಿತ್ತು ಹಾಗಾಗಿ ತಾಲ್ಲೂಕಿನ ವಿವಿದ ಭಾಗಗಳಿಂದ ಶಿಕ್ಷಕರು ಆಗಮಿಸಿ ಮತದಾನ ಮಾಡಿದರು. ತಾಲ್ಲೂಕು ಕಚೇರಿಯಲ್ಲಿ ಮತದಾನ ನಡೆಯುವ ಕಾರಣ ಮತಗಟ್ಟೆ ಸುತ್ತ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬೆಳಿಗ್ಗೆ 7ಗಂಟೆಯಿಂದ ಪ್ರಾರಂಭವಾದ ಮತದಾನದಲ್ಲಿ ಬೆಳಗಿನ ಜಾವ ಶಿಕ್ಷಕರು ಖುಷಿ ಖಷಿಯೊಂದಿಗೆ ನಾಲ್ಕೈದು ಮಂದಿಯೊಂದಿಗೆ ಬಂದು ಮತದಾನ ಮಾಡಿದರೂ ನಂತರ ಸಮಯ 12ರವರಿಗೆ ಮಂದಗತಿಯಲ್ಲಿ ನಡೆಯಿತು. ಮದ್ಯಾಹ್ನ 1 ಗಂಟೆ ಸಮಯವಾಗುತ್ತಿದ್ದಂತೆ ಶೇ 60ರಷ್ಟು ಮತದಾನವಾಯಿತು. ಈ ವೇಳೆ ಸಾಲುಗಟ್ಟಿ ಪುರುಷ ಹಾಗು ಮಹಿಳೆಯರು ಪ್ರತ್ಯೇಕ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ತಾಲ್ಲೂಕಿನಲ್ಲಿ ಒಟ್ಟು 545 ಮತಗಳು ಇದ್ದು ಇದರಲ್ಲಿ 518 ಮತಗಳು ಚಲಾವಣೆಯಾಗಿವೆ. ಮತದಾನದ ವೇಳೆ ಮತಗಟ್ಟೆ ಹೊರಗಿನ ರಸ್ತೆಯ ಅಜುಬಾಜಿನಲ್ಲಿ ಟೇಬಲ್ ಕುರ್ಚಿ ಹಾಕಿಕೊಂಡು ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗು ಶಿಕ್ಷಕ ಪ್ರತಿನಿಧಿಗಳು ಸೇರಿದಂತೆ ಬಂದುಗಳು ಮಿತ್ರರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ತಮ್ಮ ತಮ್ಮ ಅಭ್ಯಥಿಗಳ ಪರ ಬ್ಯಾನರ್ ಕಟ್ಟಿ ಶಿಕ್ಷಕರಿಗೆ ಮತಪಟ್ಟಿಯ ಚೀಟಿ ಬರೆದುಕೊಡುವ ಪ್ರಯತ್ನ ಮಾಡುತ್ತಿದ್ದರು. ಅದೇ ರೀತಿ ಕೆಲವರು ಶಿಕ್ಷಕರ ಮತ ಪಡೆಯುವ ಪ್ರಯತ್ನಗಳು ಮತಗಟ್ಟೆ ಹೊರಗೆ ಕಾಣಿಸಿಕೊಂಡಿತ್ತು.
ಅದೇ ರೀತಿ ತಮ್ಮ ಅಭ್ಯರ್ಥಿಗಳ ಪರ ಮತದಾನ ಮಾಡಲು ತಾವು ಖುದ್ದು ಮತದಾರ ಬಳಿಗೆ ಹೋಗಿ ಬೇಡಿಕೊಳ್ಳುತ್ತಿದ್ದು ಕಂಡುಬರುವಂತಾಯಿತು. ವಿಶೇಷವೆಂದರೆ ಶಿಕ್ಷಕರ ಕ್ಷೇತ್ರದಲ್ಲಿ 14 ಮಮದಿ ಅಭ್ಯರ್ಥಿಗಳು ಇದ್ದರೂ ಮತಗಟ್ಟೆ ಹೊರಗೆ ಕೆಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು, ಶಿಕ್ಷಕರು ಸೇರಿದಂತೆ ಕೇವಲ ಬಿಜೆಪಿ ಹಾಗು ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದರು. ಅದೇ ರೀತಿ ಮತಗಟ್ಟೆ ಹೊರಗೆ ಹಾಕಿದ್ದ ಟೇಬಲ್ ಕುರ್ಚಿಗಳು ಕೇವಲ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಹಾಗು ರಮೇಶ್ಬಾಬು ರವರ ಪರ ಬ್ಯಾನರ್ ಹಾಗು ಪ್ರಚಾರ ನಡೆಯುತ್ತಿತ್ತು. ಹಾಗೆಯೇ ಪಕ್ಷೇತರ ಅಭ್ಯರ್ಥಿ ಡಾ.ಕೆ.ನಾಗರಾಜ ರವರ ಬ್ಯಾನರ್ ಬಿಟ್ಟರೆ ಬೇರೆ ಯಾವ ಪ್ರಚಾರವು ಇರಲಿಲ್ಲ ಹಾಗಾಗಿ ಶ್ರೀನಿವಾಸಪುರದಲ್ಲಿ ಕೇವಲ ಬಿಜೆಪಿ ಹಾಗು ಜೆಡಿಎಸ್ ಪ್ರತಿಸ್ಪರ್ಧಿಗಳಂತೆ ಕಂಡುಬಂದಿತ್ತು. ಕಾಂಗ್ರೆಸ್ ಪಕ್ಷದ ಬ್ಯಾನರ್ ಅಥವಾ ಟೇಬಲ್ ಕುರ್ಚಿಗಳು ಕಾಣದೇ ಹಾಗು ಮತಯಾಚನೆ ಮಾಡುವವರು ಸಹ ಕಾಣದೇ ಈ ವಿಷಯ ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು.
ಮತ್ತೊಂದಡೆ ರಾಷ್ಟ್ರೀಯ ಪಕ್ಷದವರು ಸಹ ಬಿಜೆಪಿ ಕಡೆ ಮತ ಹಾಕಿಸುತ್ತಿದ್ದಾರೆಂಬ ವಿಷಯ ದೊಡ್ಡ ಮಟ್ಟದಲ್ಲಿಯೇ ಕೇಳಿ ಬರುವಂತಾಯಿತು. ಇದರಿಂದ ಈ ಬಗ್ಗೆ ಕೆಲವು ಶಿಕ್ಷಕರನ್ನು ಪ್ರಶ್ನಿಸಿದರು ವೈ.ಎ.ನಾರಾಯಣಸ್ವಾಮಿ ಸ್ಥಳೀಯರು ಸ್ವಇಚ್ಚೆಯಿಂದ ಮತದಾನ ಮಾಡುತ್ತಿದ್ದಾರೆ. ಇದರಲ್ಲಿ ಪಕ್ಷವಿಲ್ಲ ಎಂಬ ಮಾತು ಕೇಳಿಬರಲಾಯಿತು. ಇದರಿಂದ ಆದರೂ ಬಿಜೆಪಿ ಕಡೆ ಸಿಂಹಪಾಲು ಮತದಾನವಾಗಿತ್ತಿದೆ ಎಂಬ ಮಾತುಗಳು ಬಂದರೂ ಜೆಡಿಎಸ್ನವರು ಸಹ ಕಡಿಮೆ ಇಲ್ಲದಂತೆ ತಮ್ಮ ಅಭ್ಯರ್ಥಿ ರಮೆಶ್ಬಾಬು ಪರ ಮತಯಾಚನೆ ಜೊತೆ ಸಾಲುದ್ದದಲ್ಲಿ ಕುರ್ಚಿ ಹಾಕಿ ಕುಳಿತ್ತಿದ್ದು ನೋಡುವಂತಾಯಿತು. ಇದರ ಜೊತೆಗೆ ಬಿಜೆಪಿ ಕಾರ್ಯಕರ್ತರು ಸಹ ತಮ್ಮ ಪಕ್ಷದ ಅಭ್ಯರ್ಥಿಪರ ಮತಹಾಕಿಸಲು ಸಂಪ್ರದಾಯ ಹಾಗು ಪಕ್ಷದ ಸಿದ್ದಾಂತದ ಮೇಲೆ ಒಟ್ಟಾರೆಯಾಗಿ ಕಾಣಿಸಿಕೊಂಡಿದ್ದು ರಸ್ತೆಬದಿ ಹಾಕಿದ್ದ ಟೇಬಲ್ ಕುರ್ಚಿಗಳಲ್ಲಿ ಕಂಡುಬಂದರು. ಹಾಗಾಗಿ ಈ ಚುನಾವಣೆಯಲ್ಲಿ ಶ್ರೀನಿವಾಸಪುರ ಮತಗಟ್ಟೆಗೆ ಸಂಬಂದಿಸಿ ಒಂದು ರಾಷ್ಟ್ರೀಯ ಪಕ್ಷ ಬಿಜೆಪಿಗೆ ಮತ್ತೊಂದು ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿಗಳಿಗೆ ಮಾತ್ರ ಮತದಾನ ನಡೆಯುತ್ತಿದೆ ಎಂಬುದು ಮತಗಟ್ಟೆ ಹೊರಗೆ ಇದ್ದ ಪ್ರತ್ಯಕ್ಷದರ್ಶಿಗಳು ಅಭಿಪ್ರಾಯ ವ್ಯಕ್ತಡಿಸುವಂತಾಯಿತು.
ಹಾಗೆಯೇ ಮತದಾನದ ವೇಳೆ ತುಂತುರು ಮಳೆಯಾಗುತ್ತಿದ್ದರು ಲೆಕ್ಕಿಸದೇ ಅಭ್ಯಥಿಗಳ ಪರ ಕಾರ್ಯಕರ್ತರು ಶಿಕ್ಷಕರು ಬ್ಯಾಂಟಿಗ್ ಮಾಡುತ್ತಿದ್ದರು. ಹಾಗೆಯೇ ತಮ್ಮ ಪಕ್ಷದ ಪರವಾಗಿ ಬ್ಯಾನರ್ ಕಟ್ಟಿದ್ದ ಸ್ಥಳದಲ್ಲಿ ಬೆಳಗಿನ ಜಾವ ಉಪಹಾರ, ಮದ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಜೊತೆ ಜೊತೆಗೆ ತಂಪು ಪಾನೀಯಗಳು, ಬಾಳೆಹಣ್ಣು, ಕಡ್ಲೆಕಾಯಿ ಇತ್ಯಾದಿಯಾಗಿ ಹಾಜರಿದ್ದವರು ಸೇವಿಸುವಮತಾಯಿತು. ಇದರ ನಡುವೆ ಹೊರಗಡೆ ಓಡಾಡುತ್ತಿದ್ದ ಜನರಿಗೆ ಸಹ ಹೋಟಲ್ ಕಡೆ ಹೋಗದ ರೀತಿ ಇಲ್ಲಿ ಉಚಿತ ಉಪಹಾರ ಅನ್ನ ಸಾಂಬಾರ್ ದೊರಕಿದ್ದು ವಿಶೇಷವಾಗಿತ್ತು.
ಮತದಾನದ ಸಮಯದಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬೆಂಬಲ ಸೂಚಿಸಲು ಹಾಗು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ತೂಪಲ್ಲಿ ಆರ್. ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಜಿ.ಎಂ.ಕೃಷ್ಟಾರೆಡ್ಡಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಕಲ್ಲೂರು ಕೆ.ಕೆ.ಮಂಜುನಾಥ್, ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ರವರ ಧರ್ಮಪತ್ನಿ ಉಷಾನಾರಾಯಣಸ್ವಾಮಿ, ಕಲ್ಲೂರು ರಾಮಕೃಷ್ಣಾರೆಡ್ಡಿ, ಬಿಜೆಪಿಯ ಜಯರಾಮರೆಡ್ಡಿ, ಬಿಜೆಪಿ ಶಿವಣ್ಣ, ಕೆ.ನಾಗರಾಜ, ಕೊಟ್ರಗುಳಿ ನಾರಾಯಣಸ್ವಾಮಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ಜಾಮಶೆಟ್ಲು ಶ್ರೀನಿವಾಸ್ ಸೇರಿದಂತೆ ಶಿಕ್ಷಕ ಪ್ರತಿನಿಧಿಗಳು ಹಾಜರಾಗಿದ್ದರು.
ಒಟ್ಟಾರೆಯಾಗಿ ಚುನಾವಣೆಯು ಶಾಂತಿಯುತವಾಗಿ ನಡೆದರೂ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಜೆಡಿಎಸ್ನ ರಮೇಶ್ಬಾಬು ಪರ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಇದರ ನಡುವೆ ಪಕ್ಷೇತರ ಅಭ್ಯರ್ಥಿ ಡಾ. ಕೆ.ನಾಗರಾಜ ಪರ ಕೆಲವು ಕಾರ್ಯಕರ್ತರು ಸಹ ಹಾಜರಾಗಿದ್ದು ಬಿಟ್ಟರೆ ಉಳಿದ ಅಭ್ಯರ್ಥಿಗಳ ಪರ ಮತ ಕೇಳುವವರೆ ಇಲ್ಲದ ಹಾಗೆ ಜನವಲಯದಲ್ಲಿ ಚರ್ಚೆಗೆ ಇದು ಅವಕಾಶವಾಗಿತ್ತು ಆದರೂ ಪಲಿತಾಂಶದಲ್ಲಿ ಯಾರಿಗೆ ಎಷ್ಟು ಮತ ಯಾರಿಗೆ ಜಯಮಾಲೆ ಎಂಬುದು ಅಲ್ಲಿಯವರಿಗೆ ಕಾಯಬೇಕಾಗಿದೆ.


