ಕೋಲಾರ: ಅಲರ್ಜಿ ಉಸಿರಾಟದ ತೊಂದರೆ ಹಾಗೂ ಅಸ್ತಮಾ ತೊಂದರೆಗಳಿಂದ ಬಳಲುತ್ತಿರುವವರು ಉಚಿತ ಅಸ್ತಮಾ ಕ್ಯಾಂಪ್‍ನ ಪ್ರಯೋಜನವನ್ನು ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಕೋಲಾರ ತಾಲ್ಲೂಕು ಸುಗಟೂರು ಹೋಬಳಿ, ಕಿತ್ತಂಡೂರು ಗ್ರಾಮದ ಆನಂದ ಮಾರ್ಗ ಯೂನಿವರ್ಸಲ್ ರಿಲೀಫ್ ಟೀಮ್ ಹಾಗೂ ಆನಂದ ಸುವರ್ಣ ರೂರಲ್ ಸೆವಲೆಪ್‍ಮೆಂಟ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಅಸ್ತಮಾ ಕ್ಯಾಂಪ್‍ನ್ನು ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.
ಅವಧೂತರು ಸಮಾಜ ಸೇವೆಯ ಜತೆಗೆ ಶಾಲೆಯನ್ನು ಪ್ರಾರಂಭಿಸಿ ಬಡ ಮತ್ತು ಹಿಂದಿಳದ ವರ್ಗದ ಮಕ್ಕಳಿಗೆ ವಿದ್ಯೆ ಕೊಡುವುದರ ಜತೆಗೆ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದು, ದಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ ವಿದ್ಯೆ ಪಡೆಯುವ ವಾತಾವರಣವಿದೆ ಎಂದರು.
ಆಚಾರ್ಯ ಚಿನ್ಮಯಾನಂದ ಅವಧೂತ ಮಾತನಾಡಿ, ಸುತ್ತಮುತ್ತಲ ಜನರಿಗೆ ಆರೋಗ್ಯ ಸಮಸ್ಯೆಗಳನ್ನು ಕಂಡು ನನ್ನ ಗುರುಗಳಾದ ಶ್ರೀ ಶ್ರೀ ಆನಂದ ಮೂರ್ತಿಜೀ ರವರ ಆರ್ಶೀವಾದದಿಂದ ಅಸ್ತಮ ಗುಣಪಡಿಸುವ ಔಷಧಿಯನ್ನು ತಯಾರಿಸಿ ಉಚಿತವಾಗಿ 18ವರ್ಷಗಳಿಂದ ನೀಡುತ್ತಿದ್ದು, ಇದರ ಪ್ರಯೋಜನವನ್ನು ಸಾವಿರಾರು ಜನ ಪಡೆದುಕೊಂಡು ಆರೋಗ್ಯವಂತಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜನ್ನಘಟ್ಟ ಕೃಷ್ಣಪ್ಪ, ಶೆಟ್ಟಿಮಾದಮಂಗಲ ಮಂಜುನಾಥ್, ಹಾಲೇರಿ ಬಾಬು, ಆಚಾರ್ಯ ಮಹಿತೋಷಾನಂದ ಅವದೂತ, ಸುಗಟೂರ ವಿಶ್ವನಾಥ್, ಸುಗಟೂರು ಎಸ್.ಎಫ್.ಎಸ್.ಇ.ಎಸ್ ಅಧ್ಯಕ್ಷ ತಿಮ್ಮರಾಯಪ್ಪ, ಕಿತ್ತಂಡೂರು ಸಂಪತ್ ಕುಮಾರ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



