2 (5)

ಬಂಟ್ವಾಳ: ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲ ರ ಸಂಘ, ಕಂದಾಯ ಇಲಾಖೆ ಹಾಗೂ ಬಂಟ್ವಾಳ ಪುರಸಭೆ ಸಂಯುಕ್ತ ಆಶ್ರಯ ದಲ್ಲಿ ಇಲ್ಲಿನ ಕೋರ್ಟ್ ಆವರಣದಲ್ಲಿ ಹಾಗೂ ಮಿನಿವಿಧಾನ ಸೌಧದ ಎದುರಿನಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯದ ನ್ಯಾಯಧೀಶ ಮೊಹಮ್ಮದ್ ಇಮ್ತಿಯಾಝ್ ಆಹಮ್ಮದ್, ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಧೀಶೆ ಪ್ರತಿಭಾ ಡಿ.ಎಸ್, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಮಾಜಿ ಅಧ್ಯಕ್ಷ ಬಿ.ವೆಂಕಟರಮಣ ಶೆಣ್ಯೆ ಹಾಗೂ, ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್ ಬಿ., ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್, ಅರಣ್ಯ ರಕ್ಷಕರಾದ ವಿನಯಕುಮಾರ್, ಶಿವಲಿಂಗ ಸ್ವಾಮಿ, ಸಿಬ್ಬಂದಿಗಳಾದ ಭಾಸ್ಕರ್ ಡಿ. ಜಯರಾಮ, ಸ್ನೇಕ್ ಕಿರಣ್ ಪಿಂಟೊ, ನಗರ ಠಾಣಾ ಎಸ್. ಐ. ಚಂದ್ರಶೇಖರ್, ಪುರಸಭಾ ಅಧಿಕಾರಿ ರತ್ನ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

1 (7)

By suddi9

Leave a Reply

Your email address will not be published. Required fields are marked *