1 (6)

ಬಂಟ್ವಾಳ: ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರು ಜತೆ ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ವಿಶ್ವಾಸಕ್ಕೆ ಪಡೆದು ಕೊಂಡಿಯಾಗಿ ಕೆಲಸ ಮಾಡಿದಾಗ ಸಹಕಾರಿ ಸಂಘಗಳು ಬೆಳೆಯುತ್ತದೆ ಎನ್ನುವುದಕ್ಕೆ ಬಂಟ್ವಾಳ ಸಹಕಾರಿ ಸಂಘಗಳು ಸಾಕ್ಷಿ ಎಂದು ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಟಿ.ರಾಜಾರಾಂ ಭಟ್ ಹೇಳಿದರು.

ಬಿ.ಸಿ.ರೋಡು ಡಿಸಿಸಿ ಬ್ಯಾಂಕ್ ನಲ್ಲಿ   ಬಂಟ್ವಾಳ ತಾಲೂಕಿನ ಪ್ರಾಥಮಿಕ ಕೃಷಿಪತ್ತಿನ   ಸಹಕಾರಿ  ಸಂಘಗಳ  ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳ ಒಕ್ಕೂಟದ ವತಿಯಿಂದ  ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ವಿದಾಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ವೇಳೆ  ಕೆದಿಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ  ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಚೆನ್ನಪ್ಪ ಗೌಡ ಹಾಗೂ ಬಿ.ಸಿ.ರೋಡು ಡಿಸಿಸಿಬ್ಯಾಂಕ್ ನ ಶಾಖಾ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ ಆನಂದ ಅವರನ್ನು ಸನ್ಮಾನಿಸಲಾಯಿತು.

ದ.ಕ.ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಮಾತನಾಡಿ, ಪ್ರಮಾಣಿಕತೆ,  ಆಸಕ್ತಿ ಮತ್ತು ಉದ್ದೇಶ ಕೂಡ ಸಹಕಾರಿ ಕ್ಷೇತ್ರಕ್ಕೆ ಮುಖ್ಯ ಎಂದು ಹೇಳಿದರು.

ಪಿಎಲ್ ಡಿ ಬ್ಯಾಂಕ್ ನ ಅಧ್ಯಕ್ಷ ಸುದರ್ಶನ್ ಜೈನ ಮಾತನಾಡಿ,  ಜನರ ಹಾಗೂ ರೈತರಿಗೆ ಪೂರಕವಾಗಿ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ ಸಿಂಗ್, ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್, ಡಿಸಿಸಿ ಬ್ಯಾಂಕ್ ನ ವಿಟ್ಲ ವಲಯ ಮೇಲ್ವಿಚಾರಕ ಎಚ್ ಯೋಗೀಶ್, ಬಂಟ್ವಾಳ ವಲಯ ಮೇಲ್ವಿಚಾರಕ ಕೇಶವ ಕಿಣಿ, ಬಿ.ಸಿ.ರೋಡ್ ಡಿಸಿಸಿ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕಿ ಸೌಮ್ಯ ಮತ್ತು ಒಕ್ಕೂಟದ ಉಪಾಧ್ಯಕ್ಷ ಆಲ್ಬರ್ಟ ಡಿ.ಸೊಜ ಉಪಸ್ಥಿತರಿದ್ದರು.

ಮಣಿ ನಾಲ್ಕೂರು ಸೇವಾ ಸಹಕಾರಿ‌ಬ್ಯಾಂಕ್ ನ‌ಮುಖ್ಯ ಕಾರ್ಯನಿರ್ವಣಾಧಿಕಾರಿ ಸುಧಾಕರ ಸ್ವಾಗತಿಸಿ, ಕಾವಳ ಪಡೂರು ಸೇವಾ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಶಿವಾನಂದ ವಂದಿಸಿದರು. ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ ನ ಮುಖ್ಯಕಾರ್ಯನಿರ್ವಾಣಾಧಿಕಾರಿ ಈಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *