ಬಂಟ್ವಾಳ: ಪ್ರಾಕೃತಿಕ ವಿಕೋಪ ಎದುರಿಸಲು ಮತ್ತು ಸಂಭಾವ್ಯ ದುರಂತಗಳನ್ನು ತಪ್ಪಿಸಲು ದ.ಕ.ಜಿಲ್ಲಾಧಿಕಾರಿಗಳು ಜಿಲ್ಲೆಯ ವಿವಿಧೆಡೆ ಗೃಹರಕ್ಷಕ ಸಿಬ್ಬಂದಿಯನ್ನು ಒಳಗೊಂಡ ಬಂಟ್ವಾಳ ವಿಪತ್ತು ನಿರ್ವಹಣಾ ತಂಡದ ರಚಿಸಲು ಆದೇಶಿಸಿದಂತೆ ಬಂಟ್ವಾಳ ಗೃಹರಕ್ಷಕ ತಂಡದ ರಚನೆಯಾಗಿದೆ.
ಸದಸ್ಯರ ತಂಡದಲ್ಲಿ ನುರಿತ ಈಜುಗಾರರಾದ ಶ್ರೀನಿವಾಸ ಆಚಾರ್ಯ, ಯೋಗೀಶ್ , ರಮೇಶ್ ಪೂಜಾರಿ, ಹರಿಪ್ರಸಾದ್ , ವಿಜಯ್ ಕುಮಾರ್ ಕಾರ್ಯನಿರ್ವಹಿಸಲಿದ್ದಾರೆ.

