ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಮಾಜಶಾಸ್ತ್ರ ಉಪನ್ಯಾಸಕ ಪಿ. ಶಂಕರನಾರಾಯಣ ಭಟ್‍ರವರಿಗೆ ವಿಠಲ ವಿದ್ಯಾ ಸಂಘದ ಆಡಳಿತ ಮಂಡಳಿ ಹಾಗೂ ಶಿಕ್ಷಕ, ಶಿಕ್ಷಕೇತರವೃಂದದಿಂದ ವಿದಾಯ ಕೂಟ ಸಮಾರಂಭವನ್ನುಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಬಡವರಾಗಿದ್ದರೂ ಶಿಕ್ಷಣಕ್ಕೆ ಬಡತನವಿಲ್ಲ. ವೃತ್ತಿಯಲ್ಲಿ ನಾವು ಎಂದು ನಾವು ಎಡವದೇ ಸರಿಯಾದ ದಾರಿಯಲ್ಲಿ ಸಾಗುವುದೇ ಜೀವನ. ಗೊತ್ತಿಲ್ಲದೇ ಇರುವುದನ್ನು ಮತ್ತೆ ಮತ್ತೆ ಅರಿತು ತಿಳಿದುಕೊಳ್ಳುವುದೇ ಶಿಕ್ಷಕನ ನಿಜವಾದ ಕರ್ತವ್ಯ. ಜ್ಞಾನ ಎನ್ನುವುದು ಸಮುದ್ರದಿಂದ ತೆಗೆದ ನೀರಿನ ಪ್ರಮಾಣದಷ್ಟೇ ಅಲ್ಲ. ಅದಕ್ಕಿಂತಲೂ ಮಿಗಿಲಾದುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಜನಾರ್ಧನ ವರ್ಮ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಸಂಚಾಲಕ ಎಲ್. ಎನ್. ಕೂಡೂರು, ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯರಾದ ಪದ್ಮಯ್ಯ ಗೌಡ, ಜಾನ್ ಡಿಸೋಜ, ಸುಬ್ರಾಯ ಪೈ, ಪ್ರಾಂಶುಪಾಲ ಆದರ್ಶ ಎ. ಎಸ್, ಉಪಪ್ರಾಂಶುಪಾಲ ಕಿರಣ್ ಕುಮಾರ್, ಸುಪ್ರಜಿತ್ ಐಟಿಐ ಪ್ರಾಂಶುಪಾಲ ರಘರಾಂ ಶಾಸ್ತ್ರಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಚೇತನಾ, ಸಂಪಾವತಿ, ರೂಪಾ ಪ್ರಾರ್ಥಿಸಿ, ಕಾರ್ಯದರ್ಶಿ ಯಶವಂತ ವಿಟ್ಲ ಸ್ವಾಗತಿಸಿ, ಉಪನ್ಯಾಸಕ ಚಂದ್ರಕಾಂತ ವಂದಿಸಿ, ಉಪನ್ಯಾಸಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

