ವಿಟ್ಲ: ಇಲ್ಲಿನ ದ.ಕ. ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಮಂಗಳವಾರ ಅದ್ದೂರಿಯಾಗಿ ನಡೆಯಿತು.
ಈ ವೇಳೆ ವಿಟ್ಲದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಆಕರ್ಷಕ ಮೆರವಣಿಗೆ ನಡೆಸಲಾಯಿತು. ಬಳಿಕ ಹೊಸತಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಆರತಿ ಬೆಳಗಿಸಿ, ಪುಷ್ಪ ವೃಷ್ಠಿಗೈದು ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿಎಂಸಿ ಗೌರವಾಧ್ಯಕ್ಷ ಸುಬ್ರಾಯ ಪೈ, ಎಸ್ ಡಿಎಂಸಿ ಅಧ್ಯಕ್ಷ ಜಗನ್ನಾಥ ಕಾಸರಗೋಡು, ಮುಖ್ಯೋಪಾಧ್ಯಾಯ ವಿಶ್ವನಾಥ.ಬಿ., ರಾಜೇಶ್ ವಿಟ್ಲ ಮತ್ತಿತರರು ಭಾಗವಹಿಸಿದ್ದರು.
ಮೆರಗಣಿಗೆಯಲ್ಲಿ ವಿವಿಧ ಬೊಂಬೆಗಳು, ಹುಲಿವೇಷ, ಜಾಗೃತಿ ಮೂಡಿಸುವ ಘೋಷವಾಕ್ಯಗಳು, ಬ್ಯಾಂಡ್ಸೆಟ್ಗಳು ಆಕರ್ಷಣೀಯವಾಗಿದ್ದವು.


