ಉಡುಪಿ: ಯೋಗವು ಆರೋಗ್ಯದೊಂದಿಗೆ ಮಾನಸಿಕ ವಿಕಸನಕ್ಕೆ ಸಹಾಯಕ ಎಂದು ಉಡುಪಿ ಲೋಂಬಾರ್ಡ್ ಮೆಮೋರಿಯಲ್ ಆಸ್ಪತೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಅಭಿಪ್ರಾಯಪಟ್ಟಿದ್ದಾರೆ.
ಮಿಷನ್ ಆಸ್ಪತ್ರೆ, ಬಡಗುಬೆಟು ಕೋ.ಅ.ಸೋಸೈಟಿ ಹಾಗೂ ಆಳ್ವಸ್ ಯೋಗ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಇಲ್ಲಿನ ಮಿಷನ್‍ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 15 ದಿನಗಳ ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗವು ಯಾವುದೇ ಜಾತಿ, ಧರ್ಮಕ್ಕೆ ಮೀಸಲಾಗಿಲ್ಲ. ಅದು ನಮ್ಮ ದೇಶದ ಆಸ್ತಿಯಾಗಿದೆ. ಮಾನಸಿಕ ಭೌತಿಕ ವಿಕಸನಕ್ಕೆ ಇದು ಪೂರಕವಾಗಿದ್ದು, ನಾವು ನಮ್ಮ ಜೀವನದಲ್ಲಿ ಸಮಯದ ಹೊಂದಾಣಿಕೆ ಮಾಡಿಕೊಂಡು ಯೋಗ ಮತ್ತು ಉಸಿರಾಟದ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.
ಬಡಗುಬೆಟ್ಟು ಕೋ.ಅ.ಸೋಸೈಟಿಯ ಜಿ.ಎಂಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ನಮ್ಮ ಯೋಗವು ಇಂದು ವಿಶ್ವಮಾನ್ಯವಾಗಿದೆ. ಇದರ ಬಳಕೆಯನ್ನು ನಾವೆಲ್ಲರೂ ಮಾಡಿ ಉತ್ತಮ ಆರೋಗ್ಯ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ರಫೀಕ್‍ಖಾನ್ ವಹಿಸಿದ್ದರು. ಹಿರಿಯ ವೈದ್ಯ ಡಾ. ಗಣೇಶ್ ಕಾಮತ್, ಆಡಳಿತಾಧಿಕಾರಿ ಡಾ. ಡೋನಾಲ್ಡ್ ಅಂಚನ್, ಪ್ರಬಂಧಕ ರೋಲ್ಯಾಂಡ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಮೆನೆಜಸ್, ನರ್ಸಿಂಗ್ ಅಧೀಕ್ಷಕಿ ಅಲನ್ ಮಥಾಯಿಸ್, ವೈದ್ಯರಾದ ಡಾ. ಎಸ್.ಪಿ ಆನಂದ್, ಡಾ. ಲೀಲಾ ಕ್ರಿಸ್ಟಿನ್, ತರಬೇತುದಾರ ಝುಬೈದಾ, ಸ್ವಾತಿ, ಜೇಸಿ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭುಕರ್ವಾಲು ಮತ್ತಿತರರು ಉಪಸ್ಥಿತರಿದ್ದರು.
ರೋಹಿ ರತ್ನಾಕರ್ ಕಾರ್ಯಕ್ರಮ ನಿರ್ವಹಿಸಿದರು.

