bantwal_rajesh-naik_nnr_newsk_48011

ಬಂಟ್ವಾಳ: ಮಂಗಳವಾರ ಸುರಿದ ಭಾರೀ ಮಳೆಗೆ ಹಾನಿಗೀಡಾದ ತಾಲೂಕಿನ ಪ್ರದೇಶಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನರಿಕೊಂಬು ಗ್ರಾಮದಲ್ಲಿ ವಿಶ್ವನಾಥ ಹಾಗೂ ಬಾಬು ಎಂಬವರ ಮನೆ ಗೋಡೆ ಕುಸಿದು ಹಾನಿ ಹಾಗೂ ಎರಿಮಲೆ ಕಾಡೆದಿ ದೇವಸ್ಥಾನದ ಮುಂಭಾಗದಲ್ಲಿ ಮಣ್ಣು ಕುಸಿದ ಬಗ್ಗೆ ನಷ್ಟದ ಕುರಿತು ಅಂದಾಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಜೀಪ ಮುನ್ನೂರು ಗ್ರಾಮದ ಸುನೀತ ಚಂದ್ರಶೇಖರ ಎಂಬವರಿಗೆ ಸೇರಿದ 3.50 ಎಕರೆ ಅಡಕೆ ತೋಟದಲ್ಲಿ ನೀರು ನಿಂತಿದ್ದಲ್ಲದೆ ಗಾಳಿಗೆ ಸುಮಾರು 20ಕ್ಕೂ ಹೆಚ್ಚು ಫಲಭರಿತ ಅಡಕೆ ಗಿಡಗಳು ಧರಾಶಾಹಿಯಾಗಿದ್ದರ ಬಗ್ಗೆ ಪರಿಹಾರ ನೀಡಿವುದರ ಬಗ್ಗೆ ಭೆವಸೆ ನೀಡಿದರು.

ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಸಂಗ್ರಹಕ್ಕೆ ಆರು ಮೀಟರ್ ಗೆ ಹಾಕಲಾದ ಹಲಗೆಯನ್ನು ತೆರವುಗೊಳಿಸದಿರುವುದರಿಂದ ಸಾಂಬಾರಗುರಿ ಪ್ರದೇಶದಲ್ಲಿ ತೋಟಗಳಿಗೆ ನೀರು ನುಗ್ಗಿ ಮುಳುಗಡೆಯಾಗಿದ್ದು, ಅಡಕೆ ತೋಟಕ್ಕೆ ಅಪಾರ ನಷ್ಟ ವುಂಟಾಗುವ ಆತಂಕ ಕೃಷಿಕರನ್ನು ಕಾಡಿದೆ. ಇದನ್ನು ಪರಿಶೀಲಿಸಿದ ರಾಶೇಶ್ ಅವರು ಸಂತ್ರಸ್ತೆ ಸುನೀತಾ ಚಂದ್ರಶೇಖರ್ ಅವರಿಂದ ಮಾಹಿತಿ ಪಡೆದರು. ತಕ್ಷಣ ತಾಲೂಕು ತೋಟಗಾರಿಕಾ ಇಲಾಖಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಷ್ಟದ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು. ಅಲ್ಲದೆ, ಸಂತ್ರಸ್ತರಿಗೆ ಪರಿಹಾರ ನೀಡದ ಕುರಿತು ಶೀಘ್ರವೇ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸುವುದಾಗಿ ಶಾಸಕ ರಾಜೇಶ್ ನಾಯ್ಕ್ ಹೇಳಿದರು.

 

By suddi9

Leave a Reply

Your email address will not be published. Required fields are marked *