1-fgdf

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮಹಾ ಮಳೆಗೆ ಇನ್ನೊಂದು ಬಲಿಯಾಗಿದ್ದು  ಎರ್ಮಾಯ್‌ ಫಾಲ್ಸ್‌ನಲ್ಲಿ  ಫೋಟೋ ಶೂಟ್‌ಗೆಂದು ತೆರಳಿದ್ದ ಯುವ ಚಿತ್ರ ನಿರ್ದೇಶಕ ರೊಬ್ಬರು  ಬುಧವಾರ ಬೆಳಗ್ಗೆ ನೀರು ಪಾಲಾಗಿದ್ದಾರೆ.

ಮಹಾಮಳೆಗೆ ಫಾಲ್ಸ್‌ನಲ್ಲಿ ಬಲಿಯಾಗಿರುವ ವ್ಯಕ್ತಿಯನ್ನು ಕಟೀಲ್ ನಿವಾಸಿ ಸಂತೋಷ್ ಶೆಟ್ಟಿ ಎಂದು ಗುರುತಿಸಲಾಗಿದೆ.

“ಕನಸು” ಚಿತ್ರದ ನಿರ್ದೇಶಕರಾಗಿರುವ ಸಂತೋಷ್ ಶೆಟ್ಟಿ ಫೋಟೋಶೂಟ್ ಮಾಡಲೆಂದು ದ.ಕ ಜಿಲ್ಲೆಯ ಉಜಿರೆ ಸಮೀಪವಿರುವ ಎರ್ಮಾಯ್ ಫಾಲ್ಸ್ ಬಳಿ ಬಂದಿದ್ದರು. ಚಿತ್ರೀಕರಣ ನಡೆಸುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಸಂತೋಷ್ ಶೆಟ್ಟಿ ನೀರುಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಎರ್ಮಾಯ್ ಫಾಲ್ಸ್ ಗೆ ಇಂದು ಮುಂಜಾನೆ ವೇಳೆ ಒಬ್ಬ ಮಹಿಳೆ ಸೇರಿದಂತೆ ನಾಲ್ಕು ಜನರ ಚಿತ್ರ ತಂಡ ಆಗಮಿಸಿತ್ತು. ಎರ್ಮಾಯ್ ಫಾಲ್ಸ್‌ನಲ್ಲಿ 40-50 ಅಡಿ ಎತ್ತರದಿಂದ ನೀರು ಧುಮುಕುತ್ತಿದ್ದು, ನಿನ್ನೆ ಸುರಿದ ಮಳೆಗೆ ನೀರಿನ ಹರಿವು ಕೂಡ ಹೆಚ್ಚಾಗಿತ್ತು. ಚಿತ್ರೀಕರಣ ಮಾಡುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ತೆರಳಿ ಸಂತೋಷ್ ಅವರ ಶವವನ್ನು ಮೇಲಕ್ಕೆತ್ತಿದ್ದಾರೆ.

 

By suddi9

Leave a Reply

Your email address will not be published. Required fields are marked *