ಸುದ್ದಿ9ಬಂಟ್ವಾಳ: ಶ್ರೀ ಸಾಯಿ ಕಿಡ್ಸ್ ಝೋನ್ ಪ್ಲೇ ಸ್ಕೂಲ್ ಬಿ.ಸಿ.ರೋಡ್ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ಇದರ ಸಹಯೋಗದೊಂದಿಗೆ ನಡೆದ ನರ್ಸರಿ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಹಾಗೂ ಪ್ರೌಢ ಶಾಲಾ ವಿದ್ಯಾಥರ್ಿಗಳಿಗೆ ನಡೆಸಿದ ಜಿಲ್ಲಾ ಮಟ್ಟದಚಿತ್ರ ಕಲೆ ಸ್ಪದರ್ೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಇದರ ಅಧ್ಯಕ್ಷ ಶಿವಾನಂದ ಬಾಳಿಗಾ ವಹಿಸಿದ್ದರು. ವೇದಿಕೆಯಲ್ಲಿ ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ ರಾವ್, ರಾಮಚಂದ್ರ ಕಕರ್ೇರ,ರಾಜೇಶ್ ಅಮೀನ್, ಪ್ಲೇಸ್ಕೂಲ್ ನಿದರ್ೇಶಕರಾದ ಐತ್ತಪ್ಪ ಪೂಜಾರಿ ಮತ್ತು ಆರತಿ ಅಮೀನ್ ಉಪಸ್ಥಿತರಿದ್ದರು.
ನರ್ಸರಿ ವಿಭಾಗದಲ್ಲಿ ಪ್ರಥಮ ಸ್ಥಾನ ಬಡಕಬೈಲು ಸ್ಕೂಲ್ನ ವಿದ್ಯಾಥರ್ಿ ವರ್ಷ ಮತ್ತು ದ್ವಿತೀಯ ಸ್ಥಾನವನ್ನು ಮೊಡಂಕಾಪು ಇನ್ಪೇಂಟ್ ಸ್ಕೂಲ್ನ ವಷರ್ೀತ್ ಮತ್ತು ತೃತೀಯ ಸ್ಥಾನವನ್ನು ಎಸ್.ವಿ.ಎಸ್. ವಿದ್ಯಾಗಿರಿ ಸ್ಕೂಲ್ ಶ್ರೇಯಾ ಹೆಗ್ಡೆ ಪಡೆದಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಮೂಡಬಿದ್ರೆ ರೋಟರಿ ಸ್ಕೂಲ್ ಅಮ್ರತಾ ದ್ವಿತೀಯ ಬಂಟ್ವಾಳ ಎಸ್.ವಿ.ಎಸ್. ವೈಷ್ಣವಿ ರಾವ್ .ಕೆ.
ಹಿರಿಯ ಪ್ರಾಥಮಿಕ ಉರ್ವ ಸೈಂಟ್ ಅಲೋಸಿಯಸ್ ಪ್ರಾಥಮಿಕ ಸ್ಕೂಲ್ನ ಗೌರವ್ ದೇವ್ , ದ್ವಿತೀಯ ಸ್ಥಾನ ಮಂಗಳೂರು ಸೈಂಟ್ ಅಲೋಸಿಯಸ್ ಪ್ರಾಥಮಿಕ ಸ್ಕೂಲ್ನ ನಿಶಾನ್, ತ್ರತೀಯ ವಿದ್ಯಾಗಿರಿಯ ದೀಮಾಹ್ ಸುಬು ಮತ್ತು ಎಸ್.ವಿ.ಎಸ್ ವಿದ್ಯಾಗಿರಿಯ ಹಸೀಫಾ ಸಲ್ಮಾ
ಪ್ರೌಡ ಶಾಲಾ ವಿಭಾಗದಲ್ಲಿ ಮಂಚಿ ಸಲಾ ವಿದ್ಯಾರ್ಥಿ ಎಂ.ಅಹ್ಮದ್ ಫಸೀಹ್, ದ್ವಿತೀಯ ಕೊಣಾಜೆಯ ವಿಶ್ವ ಮಂಗಳ ಶಾಲಾ ವಿದ್ಯಾರ್ಥಿ ಚರಣ್ ಎಂ.ವಿ ಮತ್ತು ಕನ್ಯಾನದ ಪ್ರತಾಪ್ ಪಡೆದಿದ್ದಾರೆ.

