ಬಂಟ್ವಾಳ:  ನಗರೋತ್ಥಾನ ಹಂತ -4 ರ ಯೋಜನೆಯಡಿ ಬಂಟ್ವಾಳ ಪುರಸಭೆಗೆ 850.00 ಲಕ್ಷ ರೂ. ಮಂಜೂರಾಗಿದ್ದು, 838 .19 ಲಕ್ಷ ರೂ.ವಿನ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಪೌರಾಡಳಿತ ಸಚಿವ ರಹೀಂಖಾನ್ ವಿಧಾನಸಭೆಯಲ್ಲಿ‌ ತಿಳಿಸಿದ್ದಾರೆ.


ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ಬಾಕಿ 11.81 ಲಕ್ಷ ರೂ.ವಿಗೆ  ಕ್ರಿಯಾ ಯೋಜನೆಯ ಪ್ರಸ್ತಾವನೆ ಸ್ವೀಕಾರವಾದ ಬಳಿಕ ನಿಯಮಾನುಸಾರವಾಗಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಶಾಸಕ ರಾಜೇಶ್ ನಾಯ್ಕ್ ಅವರ ಉಪ ಪ್ರಶ್ನೆಗೆ ಉತ್ತರಿಸಿರುವ ಪೌರಾಡಳಿತ ಸಚಿವರು‌ ಬಂಟ್ವಾಳ ಪುರಸಭೆಗೆ ನಗರೋತ್ಮಾನ ಹಂತ 4 ರ ಯೋಜನೆಯಡಿ 324.02 ಲಕ್ಷ ರೂ. ಹಾಗೂ 5 ಶೇ. ಪ್ರೋತ್ಸಾಹಧನದಡಿ 90.00 ಲಕ್ಷ ರೂ.ವನ್ನು ಬಿಡುಗಡೆಗೊಳಿಸಲಾಗಿದೆ. ಬಾಕಿ ಅನುದಾನವನ್ನು ಕಾಮಗಾರಿಯ ಪ್ರಗತಿಯನ್ನಾದರಿಸಿ ಅನುದಾನ ಲಭ್ಯತೆಯ ಮೇರೆಗೆ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *