ಬೆಂಗಳೂರು: ಮಾನವ ಸೇವೆಯೇ ಮಾಧವ ಸೇವೆ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು ನೀಡಿದ ಸಂದೇಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿ ಅನುಸರಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ ‌ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು – ಕರ್ನಾಟಕ ಉತ್ತರದ ರಾಜ್ಯಾಧ್ಯಕ್ಷ  ಎಂ ಪದ್ಮನಾಭ ಪೈ ಅವರು ಕರೆ ನೀಡಿದರು.WhatsApp Image 2022-04-07 at 8.38.44 PM

ಅವರು ದೈಗೋಳಿ ಯ ಸಾಯಿನಿಕೇತನ ಸೇವಾಶ್ರಮದ ನೂತನ ಪುನರ್ವಸತಿ ಕೇಂದ್ರ ದ ಕಟ್ಟಡದ ಶಿಲಾನ್ಯಾಸದ ಸಭಾಕಾರ್ಯಕ್ರಮದ ಅಧ್ಯಕ್ಷ ಸ್ಥಾನದಲ್ಲಿ ಮಾತನಾಡುತ್ತಿದ್ದರು. ಶ್ರೀ ಸಾಯಿ ಸೇವಾ ಪ್ರತಿಷ್ಠಾನ ಈ ಆಶ್ರಮದ ಮೂಲಕ ನಡೆಸುತ್ತಿರುವ ನಿಸ್ವಾರ್ಥ ಸೇವೆ ಅತ್ಯಂತ ‌ಶ್ಲಾಘನೀಯ. 250 ಕ್ಕೂ ಮೀರಿದ ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡುವ ಈ ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸುವುದರ ಮೂಲಕ ಭಗವಂತನ ಕೃಪಾಶೀರ್ವಾದ ಗಳಿಸೋಣ ಎಂದು ವಿವರಿಸಿದರು.WhatsApp Image 2022-04-07 at 8.38.45 PM

ವೈದಿಕ ವಿದ್ವಾಂಸರಾದ ಶ್ರೀ ವೇದಮೂರ್ತಿ ಬೋಳಂತಕೋಡಿ ರಾಮಭಟ್ಟರು ಶಿಲಾನ್ಯಾಸವನ್ನು ವೇದೋಕ್ತವಾಗಿ ನಡೆಸಿಕೊಟ್ಟು, ಎಲ್ಲರ ಸಹಕಾರದಿಂದ ಅತಿ ಶೀಘ್ರದಲ್ಲಿ ಈ ಕಟ್ಟಡ ನಿರ್ಮಾಣವಾಗಿ ಲೋಕಾರ್ಪಣೆ ಆಗಲಿ ಎಂದು ಆಶೀರ್ವದಿಸಿದರು.WhatsApp Image 2022-04-07 at 8.38.45 PM (1)

ವಿಶೇಷ ‌ಆಹ್ವಾನಿತರಾಗಿ ಆಗಮಿಸಿದ ಇನ್ಫೋಸಿಸ್ ನ ಮಂಗಳೂರು ವಿಭಾಗದ ಅಧ್ಯಕ್ಷ ಶ್ರೀ ವಾಸುದೇವ ಕಾಮತ್ ಇಲ್ಲಿಯ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ ಶ್ಲಾಘಿಸಿದ್ದಲ್ಲದೆ ಸಮಾಜದಲ್ಲಿ ‌ಮಾನಸಿಕ ರೋಗಗಳಿಂದ ಬೀದಿಗೆ ಬೀಳಲ್ಪಟ್ಟ ರೋಗಿಗಳನ್ನು ತಂದು ಸಲಹಿ ಗುಣಮುಖರನ್ನಾಗಿಸಿ ಪುನಃ ಮನೆಗೆ‌ ಕಳಿಸುವ ವ್ಯವಸ್ಥೆ ಹೊಂದಿದ ಇಂತಹ ಸಂಸ್ಥೆ ಅತಿ ವಿರಳ. ಈ ಕಾರ್ಯಕ್ಕೆ ನಾವೆಲ್ಲರೂ ಭಾಗಿಗಳಾಗೋಣ ಎಂದರು.WhatsApp Image 2022-04-07 at 8.38.43 PM

ಕಳೆದ ಕೆಲವು ವರ್ಷಗಳಿಂದ ಆಶ್ರಮದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಬೆಂಗಳೂರಿನ Bhat Biotech ಕಂಪೆನಿಯ ಸ್ಥಾಪಕ ನಿರ್ದೇಶಕ ಡಾ ಶಾಮ ಭಟ್ಟರು ತಮ್ಮ ಒಡನಾಟದ ಅನುಭವವನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ತಮ್ಮ ದೇಣಿಗೆಯನ್ನು ಘೋಷಿಸಿದರು.WhatsApp Image 2022-04-07 at 8.38.44 PM (1)

ಶ್ರೀ ‌ಸತ್ಯಸಾಯಿ ಸೇವಾಸಂಸ್ಥೆಗಳ ಕರ್ನಾಟಕ- ಉತ್ತರದ ಮಹಿಳಾ ಸೇವಾ ಸಂಯೋಜಕಿ ಶ್ರೀಮತಿ ಪ್ರಿಯಾ ಪಿ ಪೈ, ದ.ಕ. ಜಿಲ್ಲಾಧ್ಯಕ್ಷರಾದ ಶ್ರೀ ಪ್ರಸನ್ನ N ಭಟ್ ಬಲ್ನಾಡು, ಕಾಸರಗೋಡು ಜಿಲ್ಲಾಧ್ಯಕ್ಷರಾದ ಶ್ರೀ ಹಿರಣ್ಯ ಮಹಾಲಿಂಗ ಭಟ್ , ಕಾಂಪ್ಕೋದ ನಿರ್ದೇಶಕರಲ್ಲೊಬ್ಬರಾದ ಡಾ ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ವಿಶೇಷ ಅತಿಥಿಗಳಾಗಿದ್ದು ಶುಭಾಶಂಸನೆ ಗೈದರು.

ಈ ಸಂದರ್ಭದಲ್ಲಿ ಸೇವಾರೂಪದಲ್ಲಿ ನೂತನ ಕಟ್ಟಡದ. ನಕ್ಷೆ ನಿರ್ಮಿಸಿದ ಇಂಜಿನಿಯರ್ ಶ್ರೀಮತಿ ‌ಪೂರ್ಣಿಮಾ ಅವರನ್ನು ಗೌರವಿಸಲಾಯಿತು. ಆಶ್ರಮದ ನಿವಾಸಿ ಶ್ರೀಮತಿ ‌ರೇಖಾ ಪ್ರಭು ಪ್ರಾರ್ಥನೆ ಮಾಡಿದರೆ, ಡಾ ಶಾರದಾ ಸ್ವಾಗತ, ಡಾ ಉದಯಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಅಮೈ ಸುಬ್ರಹ್ಮಣ್ಯ ಭಟ್ ವಂದನಾರ್ಪಣೆಗೈದರು.

By Suddi9

Leave a Reply

Your email address will not be published. Required fields are marked *