ಬಂಟ್ವಾಳ: ಪಲ್ಘುಣಿ ನದಿಗೆ ಅಡ್ದಲಾಗಿ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ದೋಟ ಎಂಬಲ್ಲಿನ ರೂ.42 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟು ಸಹಿತ ಸೇತುವೆ ಕಾಮಗಾರಿಯನ್ನು ಜಿಪಂ ಸದಸ್ಯ ತುಂಗಪ್ಪ ಬಂಗೇರ ಅವರು ಬುಧವಾರ ವೀಕ್ಷಿಸಿದರು.
ಈ ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದಲ್ಲಿ ನೀರಿನ ಸಮಸ್ಯೆ ಸುದಾರಿಸಲಿದ್ದು,ಬೆಳ್ತಂಗಡಿ ತಾಲೂಕಿನ ವೇಣೂರು ಕಡೆಯಿಂದ ಬಂಟ್ವಾಳದ ವಾಮದಪದವು, ಸಿದ್ದಕಟ್ಟೆ ಮೊದಲಾದ ಪ್ರದೇಶದ ಜನರಿಗೆ ಮಂಗಳೂರು ಸಂಪರ್ಕ.ಸುಗಮವಾಗಲಿದೆ.ಮಂಗಳೂರು ತಾಲೂಕಿನ ಕುಪ್ಪೆಪದವು, ಎಡಪದವು .ಇರುವೈಲು ಪ್ರದೇಶದ ಜನರಿಗೆ ಈ ರಸ್ತೆಯ ಮೂಲಕ ಬಂಟ್ವಾಳ ಹಾಗೂ ಧರ್ಮಸ್ಥಳ, ಉಜಿರೆಗೆ ತೆರಳಲು ಹತ್ತಿರವಾಗಲಿದ್ದು, ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಬಹಳಷ್ಟು ಹತ್ತಿರವಾಗಲಿದೆ ಎಂದು ಅವರು ತಿಳಿಸಿದ್ದಾರೆ.ತಾಪಂ ಸದಸ್ಯ ಪ್ರಭಾಕರ ಪ್ರಭು,ಮಾಜಿ ಸದಸ್ಯರಾದ ರತ್ನಕುಮಾರ ಚೌಟ,ರೇವತಿ,ಗ್ರಾಪಂ ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕೆ,ಪ್ರಮುಖರಾದ ನವೀನ್ ಪೂಜಾರಿ,ತೇಜಸ್,ಶಶಿಧರ,ರಾಮಕೃಷ್ಣ ನಾಯಕ್,ಚಂದ್ರಶೇಖರ ಪೂಜಾರಿ,ಹರಿಯಪ್ಪ ನಾಯಕ್,ಗಂಗಾಧರ ಕರ್ಪೆ,ಜಯರಾಮ ಅಡಪ,ಹರೀಶ್ ಪೂಜಾರಿ,ಜನಾರ್ದನ ನಾಯ್ಕ್,ಸೈಟ್ ಸುಪರ್ ವೈಸರ್ ಮಂಜುನಾಥ ಮೊದಲಾದವರಿದ್ದರು.
