ಬಂಟ್ವಾಳ : ಕೊರೋನಾ ವೈರಸ್  ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ  ದ.ಕ. ಜಿಲ್ಲೆಯ ಸರಕಾರಿ ಕಚೇರಿಗಳ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ದ.ಕ.ಜಿಲ್ಲಾಧಿಕಾರಿಯವರು ಹೊರಡಿಸಿರುವ  ಆದೇಶದ ಹಿನ್ನೆಲೆಯಲ್ಲಿ ಬಂಟ್ವಾಳ ಮಿನಿ ವಿಧಾನಸೌಧದಲ್ಲೂ ಬಹುತೇಕ ಸಾರ್ವಜನಿಕ ಸೇವೆಗಳನ್ನು ತಾತ್ಕಾಲಿಕ ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ.

IMG_20200320_153839 ಕಂದಾಯ ಇಲಾಖೆಯ ಇಬ್ಬರು ಸಿಬಂದಿಗಳು ಮಿನಿವಿಧಾನಸೌಧದ ಮುಖ್ಯದ್ವಾರದಲ್ಲಿ ಕುಳಿತು ಅಗಮಿಸುವ ಜನರನ್ನು ಮನವರಿಕೆ ಮಾಡಿ ವಾಪಾಸ್ ಕಳುಹಿಸಿ ಕೊಡುತ್ತಿದ್ದರು.ಕಚೇರಿಯೊಳಗೆ ಸಿಬ್ಬಂದಿಗಳು ಕರ್ತವ್ಯದಲ್ಲಿ ನಿರತರಾಗಿದ್ದರೂ,ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅಗತ್ಯ ಸೇವೆಗಳಿದ್ದಲ್ಲಿ ಅವಕಾಶ ನೀಡಲಾಗುತ್ತಿತ್ತು.ಕಂದಾಯ ಇಲಾಖೆಯ ಮೂಲಕ ನಡೆಯುತ್ತಿದ್ದ ಅಟಲ್‍ಜೀ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ ಮತ್ತು ಆಧಾರ್ ಕೇಂದ್ರಗಳಲ್ಲಿನ ಸೇವೆಗಳು, ಆಧಾರ್ ಸೇವೆ ಒದಗಿಸುತ್ತಿರುವ ಇತರ ಕೇಂದ್ರಗಳಲ್ಲಿನ ಸೇವೆಗಳನ್ನೂ ಮಾ.31 ರವರೆಗೆ ಸ್ಥಗಿತಗೊಳಿಸಲಾಗಿದೆ.

IMG_20200320_114118ಸಾರ್ವಜನಿಕರ ಭೇಟಿಯನ್ನು ತಡೆಯುವ ಸಲುವಾಗಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಆದರೂ ಮಾಹಿತಿ ಅರಿಯದ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಮಿನಿವಿಧಾನ ಸೌಧ ಹಾಗೂ ತಾಲೂಕಿನ ಹಲವು ಸರ್ಕಾರಿ ಕಛೇರಿಗಳಿಗೆ ಆಗಮಿಸಿ, ಸೇವೆ ಲಭ್ಯವಿಲ್ಲದ ಕಾರಣ ವಾಪಾಸು ತೆರಳುತ್ತಿದ್ದ ದೃಶ್ಯಗಳು ಕಂಡು ಬಂತು.    ಮಿನಿ ವಿಧಾನಸೌಧದಲ್ಲಿ  ಕಂದಾಯ ಇಲಾಖೆ ಮಾತ್ರವಲ್ಲ  ಆಹಾರ ಶಾಖೆ , ನೋಂದಣಿ ಕಚೇರಿ ಮೊದಲಾದಕಚೇರಿಗಳಿದ್ದು,ಈ ಕಚೇರಿಯಲ್ಲು ಸೇವೆ         ಸ್ಥಗಿತಗೊಳಿಸಲಾಗಿತ್ತು.

IMG_20200320_154016 ಬಿಲ್ಲು ಸ್ವೀಕಾರ: ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಮೆಸ್ಕಾಂ ಕಚೇರಿ,ಬಂಟ್ವಾಳ ಪುರಸಭೆಯಲ್ಲಿ ಅಗತ್ಯದ ಸೇವೆಗಳು ಲಭ್ಯವಿತ್ತು.ಆದರೆ ಕಚೇರಿಗೆ ಸಾರ್ವಜನಿಕರ ಅಗಮನ ಮಾತ್ರ ಎಂದಿನಂತೆ ಇರಲಿಲ್ಲ,ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರವು ಎಂದಿನಂತೆ ವಿದ್ಯುತ್ ಬಿಲ್ಲನ್ನ ಸ್ವಕರಿಸುವ ಕಾರ್ಯ ನಡೆದಿದೆ.ಸಿಬಂದಿಗಳು ಮಾಸ್ಕ್ ಧರಿಸಿ ವಿದ್ಯುತ್ ಬಿಲ್ಲನ್ನು ಸ್ವೀಕರಿಸುತ್ತಿದ್ದರು.ಆದರೆ ಪ್ರತಿನಿತ್ಯದಂತೆ ಬಿಲ್ಲು ಪಾವತಿಗೆ ಸರತಿಯ ಸಾಲು ಮಾತ್ರ ಇರಲಿಲ್ಲ,ಹಾಗೆಯೇ ಪುರಸಭೆಯಲ್ಲು ನೀರಿನ ಬಿಲ್ಲು ಸಹಿತ ಇತರ ಕರಗಳ ಸ್ವೀಕಾರ ಎಂದಿನಂತೆ ನಡೆದಿತ್ತು.ಇಲ್ಲು ಕೂಡ ಜನರ ಸರತಿ ಸಾಲು ಮಾತ್ರ ಕಾಣಿಸಲಿಲ್ಲ.ತಾಲೂಕಿನ ಬಹುತೇಕ ಕಚೇರಿಗಳು ತೆರೆದಿದ್ದು,ಸಿಬಂದಿಗಳ ಹಾಜರಾತಿ ಇದ್ದರೂ,ಬೆರಳೆಣಿಕೆ ಜನರಷ್ಠೆ ಕಚೇರಿಗಾಗಮಿಸುತ್ತಿದ್ದ ದೃಶ್ಯ ಕಂಡು ಬಂತು.

 

By Suddi9

Leave a Reply

Your email address will not be published. Required fields are marked *