ಬಂಟ್ವಾಳ: ಹವಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನ್ವಯ ಬಾಕಿ ರೈತರ ಬೆಳೆ ವಿಮೆ ಮೊತ್ತ  ಪಾವತಿಸಲು ಕ್ರಮಕೈಗೊಳ್ಳುವಂತೆ  ಬಂಟ್ವಾಳ ತಾಪಂ ಸದಸ್ಯ,ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಕರ್ನಾಟಕ ಸರಕಾರದ ತೋಟಗಾರಿಕಾ ಸಚಿವರಿಗೆ  ಮನವಿ ಮೂಲಕ ಒತ್ತಾಯಿಸಿದ್ದಾರೆ.

IMG_20190622_204841
ದ.ಕ.ಜಿಲ್ಲೆಯ ಬಂಟ್ವಾಳ ತಾ.ನ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದಲ್ಲೇ ಸುಮಾರು ರೈತರು 2018-19 ನೇ ಸಾಲಿನಲ್ಲಿ ಹವಾಮಾನ ಅಧಾರಿತ ಬೆಳೆ ವಿಮಾ ಯೋಜನೆ ಅನ್ವಯ ನಿಯಾಮನುಸಾರ ತಮ್ಮ ,ತಮ್ಮ ಕ್ರಷಿ ,ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ಪ್ರೀಮಿಯಂ ಪಾವತಿಸಿ ಬೆಳೆ ವಿಮೆ ಮಾಡಿಸಿದ್ದಾರೆ.    ಆದರೆ 2018-20 ನೇ ಸಾಲಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿನ ಅಡಿಕೆ ಬೆಳೆಗೆ  ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧೀನದಲ್ಲಿ ಬರುವ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಕೃಷಿ ಸಾಲ ಹೊಂದಿರುತ್ತಾರೆ. ಇಂತಹ ಹಲವಾರು ರೈತರು ಬೆಳೆ ವಿಮೆ ಮಾಡಿಸಿ ಪ್ರೀಮಿಯಂ ಪಾವತಿಸಿದರೂ ಇದುವರೆಗೂ ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಕೆಲವು ರೈತರಿಗೆ ವಿಮಾ ಪರಿಹಾರ ಮೊತ್ತ ಪಾವತಿಯಾಗಿರುವುದಿಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.ಇದೇ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪ್ರಾಥಮಿಕ ಸಹಕಾರಿ ಸಂಘಗಳಲ್ಲಿಯು ಸಾವಿರಾರು ರೈತರು ಬೆಳೆ ವಿಮಾ ಯೋಜನೆ ಪ್ರೀಮಿಯಂ ಮೊತ್ತ ಪಾವತಿಸಿದರೂ ಇನ್ನೂ ಕೂಡ ಕೆಲ ರೈತರಿಗೆ ಬೆಳೆ ಪರಿಹಾರ ಮೊತ್ತ ಬಂದಿರುವುದಿಲ್ಲಹಾಗಾಗಿ ಈ ರೈತರಿಗೆ ಯೋಜನೆ ಮಾರ್ಗಸೂಚಿ ಪ್ರಕಾರ ಬೆಳೆ ವಿಮಾ ಪರಿಹಾರ ಪಾವತಿಸಲು ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮೂಲಕ ತೋಟಗಾರಿಕಾ ಸಚಿವರನ್ನು ಪ್ರಭಾಕರ ಪ್ರಭು ಅವರು ಆಗ್ರಹಿಸಿದ್ದಾರೆ. ಮನವಿಯ ಪ್ರತಿಯನ್ನು ದ.ಕ.ಜಿಪಂ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೆಶಕರಿಗೆ ಮತ್ತು ಡಿಸಿಸಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೂ ರವಾನಿಸಿದ್ದಾರೆ.

By suddi9

Leave a Reply

Your email address will not be published. Required fields are marked *