ಬಂಟ್ವಾಳ : ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಮತ್ತು ಪದಾಧಿಕಾರಿಗಳು ಒಕ್ಕೆತ್ತೂರು ಮಂಜಲಾಡಿ ನಿವಾಸಿ ಮಂಜಪ್ಪ ಗೌಡ ಇವರ ಅನಾರೋಗ್ಯಕ್ಕೆ ಒಳಗಾದ ಮಗ ದಿಗಂತ್ ಇವರ ಮನೆಗೆ ಬೇಟಿನೀಡಿ ಸಂಘಟನೆಯ ಸದಸ್ಯರು ಮತ್ತು ಇತರ ದಾನಿಗಳಿಂದ ಸಂಗ್ರಹಿಸಿದ 50,000 ರೂಪಾಯಿಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ಯು ವಿಟ್ಲ, ತಾಲೂಕು ಅಧ್ಯಕ್ಷ ಗಣೇಶ್ ಸೀಗೆಬಲ್ಲೆ, ಗೌರವಸಲಹೆಗಾರ ಕುಶಾಲಪ್ಪ ಮೂಡಂಬೈಲು, ಸಂಘಟನಾ ಕಾರ್ಯದರ್ಶಿ, ಮಾಧವ ಕೋಣಾಜೆ, ನಾರಾಯಣ ಕಾವು ಮತ್ತು ಕೊರಗಪ್ಪ ಮೂಡಂಬೈಲು ಉಪಸ್ಥಿತರಿದ್ದರು.

