ಬಂಟ್ವಾಳ: ವೀರಕಂಭ ಗ್ರಾಮದ ಮಜಿ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ 99ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಲೆಗೆ ಸ್ಮಾರ್ಟ್ ತರಗತಿ ಆರಂಭಿಸಲು ಬಂಟ್ವಾಳ ಲಯನ್ಸ್ ಕ್ಲಬ್ಬಿನ  ವತಿಯಿಂದ   ಸ್ಮಾರ್ಟ್ ಟಿವಿಯನ್ನು ಹಸ್ತಾಂತರಿಸಲಾಯಿತು.  ಕ್ಲಬ್ಬಿನ ಅಧ್ಯಕ್ಷ  ಶ್ರೀನಿವಾಸ ಪೂಜಾರಿ ಮೆಲ್ಕಾರ್ ರವರು ಬಂಟ್ವಾಳ ಶಾಸಕರಾದ  ರಾಜೇಶ್ ನಾಯಕ್ ಉಳಿಪಾಡಿಗುತ್ತು ರವರ ಮೂಲಕ ಮಜಿ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ  ಸಂತೋಷ್ ಕುಮಾರ್ ಶೆಟ್ಟಿ  ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಯವರಿಗೆ ಹಸ್ತಾಂತರಿಸಿದರು.
IMG-20191209-WA0027
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು   ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯೆ ಶ್ರೀಮತಿ ಮಂಜುಳಾ ಮಾಧವ ಮಾವೆ ತಾಪಂ , ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ,  ವೀರಕಂಭ ಗ್ರಾಪಂ ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ವಿ.ಕೆ.ಅಬ್ಬಾಸ್, ಸದಸ್ಯರಾದ ಜಯಂತಿ ಜನಾರ್ದನ, ಪದ್ಮಾವತಿ, ಜಯಂತಿ, ಜನಾರ್ದನ ಪೂಜಾರಿ, ರಾಮಚಂದ್ರ ಪ್ರಭು, ಗಣ್ಯರಾದ ಎಂ.ತಿರುಮಲ ಕುಮಾರ್ ಮಜಿ, ಈಶ್ವರ ಭಟ್ ನಗ್ರಿಮೂಲೆ, ಎನ್. ದಿಲೀಪ್ ಕುಮಾರ್ ಎಂ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ಕೊಂಬಿಲ, ವಿಶ್ವನಾಥ ಎಂ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಜಯರಾಜ್ ಎಸ್. ಬಂಗೇರ,  ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಹರೀಶ ಮಾಂಬಾಡಿ, ನಿವೃತ್ತ ಮುಖ್ಯ ಶಿಕ್ಷಕ ವಿಠಲ ಶೆಟ್ಟಿ, ಗೋಳ್ತಮಜಲು ಪ್ರೌಢಶಾಲಾ ಶಿಕ್ಷಕ  ನಾರಾಯಣಗೌಡ ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ರಮೇಶ ಗೌಡ, ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *