ಬಂಟ್ವಾಳ : ಸಂಶೋಧನೆಯು ಒಂದು ನಿರಂತರವಾದ ಪ್ರಕ್ರಿಯೆಯಾಗಿದೆ. ಉತ್ತಮವಾದ ಸಂಶೋಧನೆಯು ಸಮಾಜದ ಬೆಳವಣಿಗೆಗೆ ಪೂರಕವಾ ಸ್ಪಂದಿಸಬೇಕು. ಕುತೂಹಲ, ವ್ಯುತ್ಪತ್ತಿ, ಬದ್ಧತೆಗಳಿಂದ ಸಂಶೋಧಕನಾದವನು ತನ್ನ ಸಂಶೋಧನಾ ವಿಷಯಕ್ಕೆ ಅಧಿಕೃತ ಮಾನ್ಯತೆಯನ್ನು ತಂದು ಕೊಡುತ್ತಾನೆ.

DSC_0120

ನಿರಂತರವಾದ ಅಧ್ಯಯನವು ಒಳ್ಳೆಯ ಸಂಶೋಧನೆಗೆ ಅಡಿಪಾಯವಾಗಿರುತ್ತದೆ. ಸ್ನಾತಕೊತ್ತರ ಪಠ್ಯಕ್ರಮವು ವಿಧ್ಯಾರ್ಥಿಗಳ ಸಂಶೋಧನಾ ಮನಸ್ಥಿತಿಯನ್ನು ನಿರ್ಮಿಸುವಂತಿರಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಾಯಕ ಪ್ರಾದ್ಯಾಪಕ ಡಾ. ಮುರುಗನಂದನ್ ಎಸ್. ಅಭಿಪ್ರಾಯಪಟ್ಟರು. ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ಸಂಘವನ್ನು ಉದ್ಘಾಟಿಸಿ, ‘ಸಂಶೋಧನಾ ವಿಧಾನಶಾಸ್ತ್ರ’ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು .ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕರಾದ ಮಂಜುಳಾ ಡಿ. ಅಕ್ಷತಾ ಎಸ್. ಸ್ವಾತಿ ಶೆಟ್ಟಿ ಡಿ. ಉಪಸ್ಥಿತರಿದ್ದರು. ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಶಿವಪ್ರಸಾದ್ ಅತಿಥಿ ಪರಿಚಯ ಮಾಡಿದರು. ವಿಧ್ಯಾರ್ಥಿನಿಯರಾದ ಚೈತ್ರ, ಶಾಲಿನಿ ನಾಯಕ್ ಎಮ್. ಪ್ರಾರ್ಥಿಸಿದರು. ಸ್ನಾತಕೋತ್ತರ ವಾಣಿಜ್ಯ ಸಂಘದ ಕಾರ್ಯದರ್ಶಿ ಅಶ್ವಿನಿ ಬಿ.ಎಸ್. ಸ್ವಾಗತಿಸಿ, ಜತೆ ಕಾರ್ಯದರ್ಶಿ ಹರ್ಷಿತಾ ವಂದಿಸಿದರು. ವಿಧ್ಯಾರ್ಥಿನಿ ಸಹನಾ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *