ಬಂಟ್ವಾಳ:ಕ್ರೀಡೆಯಿಂದ ಮನಸ್ಸು ಮತ್ತು ದೈಹಿಕ ಆರೋಗ್ಯದಲ್ಲಿ ಉಲ್ಲಾಸ ಉಂಟಾಗುವುದಲ್ಲದೆ ಸಂಘಟನೆಯಲ್ಲಿ ಯುವಜನತೆ ಪಾಲ್ಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹಿರಿಯ ಪ್ರಗತಿಪರ ಕೃಷಿಕ ಎ.ಗೋಪಿನಾಥ ರೈ ರಾಯಿ ಇವರು ಹೇಳಿದ್ದಾರೆ.

ಇಲ್ಲಿನ ಅರಳ ವಲಯ ಬಂಟರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ದುರ್ಗಾದಾಸ ಶೆಟ್ಟಿ ಮಾವಂತೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಮುಖರಾದ ರಂಜನ್ ಕುಮಾರ್ ಶೆಟ್ಟಿ ಅರಳ, ಪ್ರಶಾಂತ ಶೆಟ್ಟಿ ಕೊಯಿಲ, ಪ್ರಸನ್ನ ಶೆಟ್ಟಿ ಅರಳ, ಸದಾನಂದ ಶೆಟ್ಟಿ ರಾಯಿ, ಸುಧೀರ್ ಕುಮಾರ್ ಶೆಟ್ಟಿ ರಾಯಿ, ಸಂತೋಷ್ ಕುಮಾರ್ ಚೌಟ ಮಡಂದೂರು, ಸನತ್ ಕುಮಾರ್ ಅರಸ, ರೂಪಾ ಲಕ್ಷ್ಮೀಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಪುರುಷರು, ಮಕ್ಕಳು ಮತ್ತು ಮಹಿಳಾ ವಿಭಾಗದಲ್ಲಿ ನಡೆದ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಜನಾರ್ದನ ರಾಯಿ ಪಾಲ್ಗೊಂಡಿದ್ದರು.
ಸಂಘದ ಕಾರ್ಯದರ್ಶಿ ಹರೀಶ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಸುಕುಮಾರ ಶೆಟ್ಟಿ ಅರಳ ಸಹಕರಿಸಿದರು.
