ಬಂಟ್ವಾಳ : ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು .ಗುರುವಿನ ಒಳ್ಳೆಯ ಗುಣಗಳನ್ನು ತನ್ನಲ್ಲೂ ರೂಢಿಸಿಕೊಂಡು ಉತ್ತಮ ಶಿಷ್ಯನಾಗಲು ಪ್ರಯತ್ನಿಸಬೇಕು .ಎಂದು ವೀರಕಂಬ ಗ್ರಾಮದ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲಕ್ಷ್ಮಿ ಅಮ್ಮ ರವರು ಹೇಳಿದರು.
ಮಜಿ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಇದಕ್ಕು ಮೊದಲು ಶಾಲಾ ಗಾರ್ಗಿ ವನದಲ್ಲಿ ಔಷಧೀಯ ಗಿಡವನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.. ನಂತರ ಎಲ್ಲಾ ಶಿಕ್ಷಕರಿಗೂ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು .ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಹೂವ ಹಾಕುವ ಮೂಲಕ ಗೌರವಾರ್ಪಣೆ ಮಾಡಲಾಯಿತು. ಮಕ್ಕಳು ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಮಾತನಾಡಿ, ಶಾಲಾ ಮಕ್ಕಳೇ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲಾ ಶಿಕ್ಷಕರನ್ನು ವೇದಿಕೆಯಲ್ಲಿ ಕೂರಿಸಿ ಅಭಿನಂದಿಸಿ ರುವುದನ್ನು ನೋಡಿದರೆ ಮಕ್ಕಳಿಗೆ ನಮ್ಮ ಶಿಕ್ಷಕರ ಮೇಲಿರುವ ಅಭಿಮಾನವನ್ನು ತೋರಿಸುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಾಲಾ ಶಿಕ್ಷಕಿಯರಾದ ಸಿಸಿಲಿಯ ,ಶಕುಂತಲಾ, ಸಂಗೀತ ಶರ್ಮ, ಜಯಲಕ್ಷ್ಮಿ ,ಹರಿಣಾಕ್ಷಿ ,ಚೈತ್ರ ,ಶ್ವೇತ, ಗೀತಾ ,ಮೀನಾಕ್ಷಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೇಯ ಸ್ವಾಗತಿಸಿ ವಂದಿಸಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.
