ಕೈಕಂಬ: ನಾವು ನಮ್ಮ ತಂದೆ ತಾಯಿಯನ್ನು ಯಾವರೀತಿ ಪ್ರೀತಿಸುತ್ತೇವೆಯೋ ಅದೇ ರೀತಿಯಲ್ಲಿ ಭೂ ತಾಯಿಯನ್ನು ಪ್ರೀತಿಸಿ ಕಸದ ಸಮಸ್ಯೆ ವಿಶ್ವದಲ್ಲೆಡೆ ಇದೆ. ಅಮೇರಿಕ ಸ್ವಚ್ಚ ಅಮೇರಿಕವನ್ನಾಗಿ ಮಾಡಲು 40 ವರ್ಷ ತೆಗೆದುಕೊಂಡಿದೆ.ಮುಂದುವರಿದ ದೇಶವೇ ಸ್ವಚ್ಚ ಅಮೇರಿಕವನ್ನಾಗಿಸಲು 40ವರ್ಷ ತೆಗೆದುಕೊಂಡರೆ ನಮ್ಮ ದೇಶವನ್ನು ಸ್ವಚ್ಚ ಗೊಳಿಸಲು ಇನ್ನೆಷ್ಟು ವರ್ಷ ಬೇಕಾದಿತು ಎಂದು ಅತಂಕ ವ್ಯಕ್ತಪಡಿಸಿದ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿಜಿ ಅವರು ಸ್ವಚ್ಚ ಕಲ್ಪನೆ ಎಲ್ಲರಲ್ಲೂ ಮೂಡಿಲ್ಲಹಾಗಾಗಿ ಎಲ್ಲೆಂದರಲ್ಲಿ ಕಸವನ್ನು ಬಿಸಾಡಿ ಹೋಗುತ್ತಿದ್ದಾರೆ. ದೇಶದ ಮೇಲೆ ಪ್ರೀತಿ ಇದ್ದರೆ ಹೀಗೆ ಇರುತ್ತಿತ್ತ ಎಂದು ಹೇಳಿದರು. ಅವರು ಭಾನುವಾರ ಬಡಕಬೈಲು ಸ್ವಚ್ಛ ಗ್ರಾಮ ಆಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಧ್ಯಕ್ಷೆತೆಯನ್ನು ಸ್ವಚ್ಚ ರಾಯಭಾರಿ ಶೀನ ಶೆಟ್ಟಿ ವಹಿಸಿ ಮಾತನಾಡಿ ಪುತ್ತೂರಿನ ಒರ್ವ ಮಹಿಳೆ ತನ್ನ ಮನೆಯಲಿಯೇ ಪ್ಲಾಸ್ಟಿಕ್ ಕಸಗಳನ್ನು ಸ್ವಚ್ಚಗೊಳಿಸಿ ಗೋಣಿ ಚೀಲದಲ್ಲಿ ವಿಂಗಡನೆ ಮಾಡಿ ಕೂಡಿ ಇಟ್ಟಿದ್ದರು. ಮನೆಯಿಂದಲೇ ಸ್ವಚ್ಚತೆಯನ್ನು ಪ್ರಾರಂಬಿಸಿದ ಅವರನ್ನು ಇಡೀ ದೇಶವೆ ಮೆಚ್ಚುಗೆ ವ್ಯಕ್ತ ಪಡಿಸಿದೆ ಅವರು ನಮಗೆಲ್ಲರಿಗೂ ಮಾದರಿ ಎಂದು ಹೇಳಿದರು. ಸ್ವಚ್ಚ ಗ್ರಾಮ ಬಡಕಬೈಲು ಇದರ ಅಧ್ಯಕ್ಷ ನಾರಾಯಣ ಅಮ್ಮುಂಜೆ ಚಂದನ ಗಿಡಕ್ಕೆ ನೀರೆರೆಯುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಬಡಕಬೈಲು ಬದ್ರಿಯಾ ಜುಮಾ ಮಸೀದಿ ಅತಿಥಿ ಬಹು/ ಇಲ್ಯಾಸ್ ಸಹದಿ,ಮಾತನಾಡಿ ಬಡಕಬೈಲು ಸ್ವಚ್ಚ ಗ್ರಾಮ ಬಡಕಬೈಲು ಸದಸ್ಯರ ಕಾರ್ಯಕ್ರಮವು ಯಶಸ್ವಯಾಗಲಿ ಎಂದ ಅವರು ಮಾದಕವಸ್ತುಗಳಿಗೆ ಯುವಕರು ಬಲಿಯಾಗದೇ ಸ್ವಚ್ಚತಾ ಕಾರ್ಯಕ್ರಮದಂತಹ ಕಾರ್ಯಕ್ರಮದಲ್ಲಿ ಪಾಲ್ಘೊಂಡು ಉತ್ತಮ ಪ್ರಜೆಗಳಾಗಿ ಎಂದು ಕರೆ ನೀಡಿದರು.

ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಎಂ ಎಸ್ ಸಿ.ಸಿ ಕ್ಯಾಮರಕ್ಕೆ ಚಾಲನೆ ನೀಡಿದರು. ಗ್ರಾ. ಪಂ ಸದಸ್ಯಇಬ್ರಾಹೀಂ ನವಾಝ್ ಪ್ರಾಸ್ತಾವಿಸಿ ಸ್ವಾಗತಿಸಿದರು. ತಾ.ಪಂ ಸದಸ್ಯ ಯಶವಂತ ಪೂಜಾರಿ , ಸ್ವಚ್ಚತಾ ಕಾರ್ಯಗಾರ ಕಿರಣ್ ಪಕ್ಕಲ, ದ.ಕಜಿಲ್ಲಾ ಪರಿಷತ್ ಸದಸ್ಯ ಡಿ.ಎ.ಅಬುಬಕ್ಕರ್,ಕರಿಯಂಗಳ ಗ್ರಾ.ಪಂ ಸದಸ್ಯ ಸುರೇಶ್ ಮಣಿಕಂಠಪುರ,ಗ್ರಾ.ಪಂ. ಸದಸ್ಯೆ ಶಕುಂತಲಸತೀಶ್ ಮತ್ತಿತರರು ಇದ್ದರು. ಜನಾರ್ಧನ ಅಮ್ಮುಂಜೆ ನಿರೂಪಿಸಿದರು.






