ಬಂಟ್ವಾಳ: ಮಾಣಿ ಕುಲಾಲ ಸಂಘ ದ ವತಿಯಿಂದ. ಆಟಿದ ಕೂಟ ಕಾರ್ಯಕ್ರಮ ಮಾಣಿ ಕುಲಾಲ ಭವನದಲ್ಲಿ ರವಿವಾರ ನಡೆಯಿತು . ಬಿ.ಎಸ್. ಕುಲಾಲ್ ಬುಡೋಳಿ ಆಟಿದ ಕೂಟವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಭೋಜ ನಾರಾಯಣ ಕುಲಾಲ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ರಾಮಚಂದ್ರ ಕುಲಾಲ್ ನೇರಳಕಟ್ಟೆ, ಮಾಜಿ ಅಧ್ಯಕ್ಷರುಗಳಾದ ಕಜೆ ಬಾಬು ಮೂಲ್ಯ,, ಆನಂದ ಮಾಣಿ, ಮುಲಾರ್ ವೆಂಕಪ್ಪ ಕುಲಾಲ್, ಗೌರವ ಕಾರ್ಯದರ್ಶಿ ನಾರಾಯಣ ಕುಲಾಲ್ ಸೂರಿಕುಮೇರ್, ಬಿಂಬ ಪತ್ರಿಕೆಯ ಸಂಪಾದಕ ಚಿದಂಬರ ಬೈಕಂಪಾಡಿ ಉಪಸ್ಥಿತರಿದ್ದರು. ಯತಿರಾಜ್ ಕುಲಾಲ್ ಮಿತ್ತ ಪೆರಾಜೆ ಸ್ವಾಗತಿಸಿ,ನಾರಾಯಣ ಕುಲಾಲ್ ವಂದಿಸಿದರು. ಕಾರ್ಯದರ್ಶಿ ಪದ್ಮನಾಭ ಕುಲಾಲ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.
