ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ರೋಡ್ ವಲಯದ ಆಚಾರಿಪಲ್ಕೆ ಒಕ್ಕೂಟದಲ್ಲಿ ಭ್ರಾಮರಿ,ಬ್ರಹ್ಮಶ್ರೀ,ಸುಗಮ,ಮಣಿಕಂಠ ಹಾಗೂ ಪುಂಚೋಡಿ ಒಕ್ಕೂಟದಲ್ಲಿ ಮಹಾಲಿಂಗೇಶ್ವರ ಪ್ರಗತಿಬಂಧು ಸಂಘದ ಉದ್ಘಾಟನಾ ಕಾರ್ಯಕ್ರಮ ರವಿವಾರ ನಡೆಯಿತು. ಬಿ.ಸಿ.ರೋಡಿನ ವಲಯಾಧ್ಯಕ್ಷರಾದ ಶೇಖರ ಸಾಮಾನಿ ಸಂಘದ ಉದ್ಘಾಟನೆಗೈದು ಶುಭಹಾರೈಸಿದರು‌. ಬಿ.ಸಿ.ರೋಡು ವಲಯ ಮೇಲ್ವಿಚಾರಕ ಕೇಶವ ಕೆ.ನಿರ್ಣಯ ಪುಸ್ತಕ ಹಸ್ತಾಂತರಿಸಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅತಿಥಿಯಾಗಿದ್ದ ಒಕ್ಕೂಟದ ಆಧ್ಯಕ್ಷ ರಾಜೇಶ್ ಗೌಡ, ರಘನಾಥ ಅವರು ನೂತನ ಸಂಘಕ್ಕೆ ಶುಭ ಹಾರೈಸಿದರು.ಸೇವಾ ಪ್ರತಿನಿಧಿ ರೇವತಿ,ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.IMG-20190721-WA0121

By suddi9

Leave a Reply

Your email address will not be published. Required fields are marked *