ಕೈಕಂಬ:ಕಂದಾವರ ಗ್ರಾಮ ಪಂಚಾಯತಿ, ಲಯನ್ಸ್‍ಕ್ಲಬ್ ಗುರುಪುರ ಕೈಕಂಬ ಹಾಗೂ ಸ್ನಾತಕೋತರ ಸಮಾಜಕಾರ್ಯ ವಿಭಾಗ ಸಂತಅಲೋಶಿಯಸ್ ಕಾಲೇಜು ಮಂಗಳೂರು ಇದರ ಜಂಟ ಆಶ್ರಯದಲ್ಲಿ ಸಾಮಾಜಿಕ ಸಮಸ್ಯೆಗಳಾದ ಮಕ್ಕಳ ಲೈಂಗಿಕ ಶೋಷಣೆ ಪೋಸ್ಕೊ, ಮಾದಕ ವಸ್ತು ಸೇವನೆ ಮಾರಾಟ ಹಾಗೂ ರಸ್ತೆ ಸುರಕ್ಷತೆ ಇವುಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಫೆ.15 ರಂದು ಕಂದಾವರ ಪಂಚಾಯತ್ ಸಭಾಭವನದಲ್ಲಿ ಜರುಗಿತು.

15vp janajagrathi karyakrama
ಸಂಪನ್ಮೂಲ ವ್ಯಕ್ತಿಯಾಗಿ ಇಂಚರ ಪೌಂಢೇಶನ್‍ನ ಪ್ರೀತಮ್ ರೊಡ್ರಿಗಸ್, ಬಜ್ಪೆ ಪೊಲೀಸ್ ಠಾಣೆಯ ಎ.ಎಸ್.ಐ ರಾಮಚಂದ್ರ, ಹೆಡ್‍ಕಾನ್ಸೆಟೇಬಲ್ ಪುರುಷೋತ್ತಮ ಇವರು ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕಂದಾವರ ಗ್ರಾಮ ಪಂಚಾಯತಿಯ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಪಂಚಾಯತ್ ಪಿ.ಡಿ.ಒ ರೋಹಿಣಿ ಬಿ., ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಇದರ ಮಾಜಿ ಅಧ್ಯಕ್ಷ ಲ.ಜೆಪ್ರಿಯನ್ ತಾವ್ರೊ ವೇದಿಕೆಯಲ್ಲಿ ಹಾಜರಿದ್ದರು. ಲ.ಜೆಪ್ರಿಯನ್ ತಾವ್ರೊ ಸ್ವಾಗತಿಸಿ, ಕು.ಫಿಲೋಮಿನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *