ಪೊಳಲಿ: ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇರಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ವಿ2 ಕ್ರಿಯೇಷನ್ಸ್ ನಿರ್ಮಾಣದಲ್ಲಿ ಪ್ರಶಾಂತ್ ಗುರುಪುರ ಸಾಹಿತ್ಯದಲ್ಲಿ ಭರತ್ ಗುರುಪುರ ಸಂಕಲನದಲ್ಲಿ ಪ್ರಶಾಂತ್ ಸಕಲೇಶಪುರ ಅವರ ಮಧುರ ಕಂಠದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಬ್ರಹ್ಮಕಲಶೋತ್ಸವವನ್ನು ಕೊಂಡಾಡುವ “ಸ್ವಾಮಿ ಅಪ್ಪೆ ರಾಜೇಶ್ವರೀ” ಎಂಬ ತುಳು ಧ್ವನಿಸುರುಳಿಯ ಬಿಡುಗಡೆಯು ಶುಕ್ರವಾರ ಪೊಳಲಿ ದೇವಸ್ಥಾನದಲ್ಲಿ ನಡೆಯಿತು .

ದೇವಳದ ಅರ್ಚಕ ನಾರಾಯಣ ಭಟ್ ಪ್ರಸಾದ ನೀಡಿ ಆಶೀರ್ವದಿಸಿದರು. ಈಸಂಧರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ, ಅನಂತ ಪದ್ಮನಾಭ ಭಟ್, ಬಾಬುರಾವ್ ಹಾಗೂ ವಿ2 ಕ್ರಿಯೇಷನ್ಸ್ನ ಶೇಖರ್ ಬಿಸಿರೋಡು,ಚೇತನ್ ಗುರುಪುರ, ಕೀರ್ತಿರಾಜ್ ಗುರುಪುರ, ವಿಶ್ವನಾಥ ಕರಿಯಂಗಳ, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
“ಬ್ರಹ್ಮಕಲಾಷಾಭಿಷೇಕ ಹಾಡು”
“ಸ್ವಾಮಿ ಅಪ್ಪೆ ರಾಜೇಶ್ವರೀ” ಕೇಳಲು ಕ್ಲಿಕ್ ಮಾಡಿ.
