ಬಂಟ್ವಾಳ : ಬಂಟ್ವಾಳ ತಾ| ವಾಮದಪದವು ಸ. ಪ್ರ. ದ.ಕಾಲೇಜಿನಲ್ಲಿ 2018-19ನೇ ಶೈಕ್ಷಣಿಕ ಸಾಲಿನ ಕಾಲೇಜು ವಿದ್ಯಾರ್ಥಿಗಳ ಕ್ಷೇಮಪಾಲನಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ಜರಗಿತು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮ ಉದ್ಘಾಟಿಸಿದರು.1809pkt3
ಸಿದ್ದಕಟ್ಟೆ ಸ.ಪ್ರ.ದ.ಕಾಲೇಜು ಪ್ರಾಂಶುಪಾಲ ಪ್ರೋ . ಸತ್ಯನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕಾಲೇಜು ಪ್ರಾಂಶುಪಾಲ ಪ್ರೋ. | ಹರಿಪ್ರಸಾದ್ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆ ಸಲಹೆಗಾರ ಪ್ರೋ| ರಾಧಾಕೃಷ್ಣ ಎಚ್.ಬಿ., ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆ ಅಧ್ಯಕ್ಷ ಸಂದೇಶ್, ಉಪಾಧ್ಯಕ್ಷೆ ಅರುಣಾ ಎಂ.ಎಸ್., ಕಾರ್ಯದರ್ಶಿ ಮಂಜುನಾಥ, ಜತೆ ಕಾರ್ಯದರ್ಶಿ ಇಂದು ಬಿ.ಪಿ. ಅವರು ಉಪಸ್ಥಿತರಿದ್ದರು.
ಪ್ರೋ| ರೊನಾಲ್ಡ್ ಪ್ರವೀಣ್ ಕೊರೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರೋ. ಹರಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪ್ರತೀಕ್ಷಾ ವಂದಿಸಿದರು. ಪ್ರೋ. ಕೃಷ್ಣಮೂರ್ತಿ ಎಸ್.ಬಿ. ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *