ಬೆಂಗಳೂರು: ಮೇ. 7ರಂದು ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ಸೇಠ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸೆಸೆಲ್ಸಿ ಪರೀಕ್ಷೆ ಇಂದು ಮುಕ್ತಾಯಗೊಂಡಿದ್ದು, ಅಂತರ್ಜಾಲ ತಾಣಗಳಲ್ಲಿ ಮೇ. 7ರಂದು ಹಾಗೂ ಮೇ 8ರಂದು ಆಯಾ ಶಾಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ತೆರೆಕಾಣಲಿದೆ ಎಂದವರು, 2017-18ನೆ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವು ಎಪ್ರಿಲ್ ಕೊನೆಯ ವಾರದಲ್ಲಿ ಹೊರಬೀಳಲಿದೆ ಎಂದು ಹೇಳಿದರು.
‘Karnataka Secure Examination System’ ಎಂಬ ನೂತನ ಗಣಕೀಕೃತ ಪರೀಕ್ಷಾ ವಿಧಾನವನ್ನು ಜಾರಿಗೆ ತಂದಿದ್ದು, ಈ ವ್ಯವಸ್ಥೆಯು ದೇಶದಲ್ಲಿಯೆ ಪ್ರಪ್ರಥಮ ಸುರಕ್ಷಿತ ಪರೀಕ್ಷಾ ಪದ್ಧತಿಯಾಗಿದೆ ಎಂದು ತಿಳಿಸಿದರು.

