IMG-20180219-WA0272-292x300

ಧಾರವಾಡ : ಇಲ್ಲಿಯ ಶಿವಾಜಿ ವೃತ್ತದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಶಿವಾಜಿ ಜಯಂತಿ ನಿಮಿತ್ತ ಕಾಂಗ್ರೆಸ್ ಮುಖಂಡನೊಬ್ಬ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಉದ್ಘಟತನ ತೋರಿದ ಘಟನೆ ಜರುಗಿದೆ.

ಶಿವಾಜಿ ಜಯಂತಿ ಆಯೋಜಿಸಿದ್ದ ಹಿನ್ನಲೆಯಲ್ಲಿ ಮರಾಠ ಸಮಾಜದ ಮರಾಠ ವಿದ್ಯಾಪ್ರಸಾರಕ ಮಂಡಳ ಹಾಗೂ ವಿವಿಧ ಪಕ್ಷಗಳ ಮುಖಂಡರು ಶಿವಾಜಿ ಪುತ್ಥಳಿಗೆ ಗೌರವ ನಮನ ಸಲ್ಲಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಧಾರವಾಡದ ಶಿವಾಜಿ ಪುತ್ಥಳಿ ಪಕ್ಕದಲ್ಲಿಯೇ ನಿಂತು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿರುವ ದೃಶ್ಯಗಳು ಇದೀಗ ಸಾಕಷ್ಟು ವಿರೋಧಕ್ಕೆ ಗುರಿಯಾಗಿವೆ.

ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡನನ್ನು ಮಂಜುನಾಥ ಕದಂ ಎಂದು ತಿಳಿದು ಬಂದಿದೆ.  ಅವರು ಪ್ರಸ್ತುತ ಮರಾಠ ಸಮಾಜ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷರಾಗಿ ಹಾಗೂ ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದುರಂತದ ಸಂಗತಿಯೆಂದರೆ ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರಾದ ರಾಜು ಅಂಬೋರೆ ಹಾಗೂ ಅಲ್ತಾಫ್ ಕಿತ್ತೂರ, ಮುಖಂಡ ಬಸವರಾಜ ಜಾಧವ ಉಪಸ್ಥಿತರಿದ್ದರು. ಆದರೆ ಈ ಘಟನೆಯ ಬಗ್ಗೆ ಯಾರೊಬ್ಬರು ಆಕ್ಷೇಪ ವ್ಯಕ್ತಪಡಿಸದಿರುವುದು ನೋಡಿದರೆ ಅಚ್ಚರಿ ತಂದಿದೆ.

ವಾಜಿ ಪುತ್ಥಳಿಯ ಪಕ್ಕದಲ್ಲಿಯೇ ನಿಂತು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಪದ ಪೊಲೀಸ್ ಠಾಣೆಯಿಂದ ಸೂಕ್ತ ಮಾಹಿತಿ ಪಡೆದು ಮಹಾನಗರ ಪಾಲಿಕೆಯ ಕಾಂಗ್ರೆಸ್‍ನ ನಾಮನಿರ್ದೇಶಿತ ಸದಸ್ಯನ ಉದ್ದಟತನದ ವರ್ತನೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ರೇಣುಕಾ ಸುಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

 

By Suddi9

Leave a Reply

Your email address will not be published. Required fields are marked *