010

ಬಂಟ್ವಾಳ: ತಾರತಮ್ಯ ರಹಿತ ಬದುಕು ನಿರ್ಮಾಣವಾಗಬೇಕಾದರೆ ಧರ್ಮದೊಳಗೆ ರಾಜಕೀಯ ನುಸುಳಬಾರದು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಹಾ ಸಂಸ್ಥಾನಂನ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ತಾಲೂಕಿನಲ್ಲಿ ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ತಾಲೂಕು ವತಿಯಿಂದ ವೇದ ಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯರ ನೇತೃತ್ವದಲ್ಲಿ ಲೋಕ ಕಲ್ಯಾಣೋತ್ಸವ ಹಾಗೂ ಸೀತಾ ರಾಮ ಲೋಕ ಕಲ್ಯಾಣೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

0123

ಪ್ರಸ್ತುತದಲ್ಲಿ ರಾಜಕಾರಣಿಗಳು ಜಾತಿ, ಪಕ್ಷದಲ್ಲಿ ಕೆಸರೆರಟಾಚಕ್ಕೆ ಕೈ ಹಾಕಿದ್ದು, ದಂಡ ಸಂಹಿತೆ ಇಲ್ಲಿ ದುರ್ಬಲವಾಗಿದೆ. ಈ ನಿಟ್ಟಿನಲ್ಲಿ ನ್ಯಾಯವಾದಿಗಳು ಹಾಗೂ ಮಠಾಧೀಶರು ಒಗ್ಗಟ್ಟಾಗಿ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದರು.

ಸಚಿವ ರೈ ಮಾತನಾಡಿ, ಹಿಂಸಿಸುವುದು ಮತ್ತು ಪ್ರಚೋದಿಸುವುದು ಸರಿಯಾದ ಕ್ರಮವಲ್ಲ. ಮನುಷ್ಯ ಮನುಷ್ಯನ ನಡುವೆ ಅಪನಂಬಿಕೆ ಜಾಸ್ತಿಯಾಗುವ ಈ ಸಂದರ್ಭದಲ್ಲಿ  ಸಮಾಜದ ಸ್ವಾಸ್ಥ್ಯ ಕಾಪಾಡಲು ಮಠಾಧೀಶರು ಮುಂದಾಗಬೇಕು ಎಂದು ಕರೆ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಹಿಂದು ಧರ್ಮ ಜಗತ್ತಿನ ಇತರ ಧರ್ಮಕ್ಕೂ ಆಸರೆ ನೀಡಿದೆ. ಆಧ್ಯಾತ್ಮ ಚಿಂತನೆಯನ್ನು ಜಗತ್ತಿಗೆ ಪರಿಚಯಿಸಿದ ಗುರುಪೀಠ ಶ್ರೇಷ್ಠ, ಸಮಾಜದ ಕ್ರಾಂತಿ ಪುರುಷ ಬ್ರಹ್ಮಶ್ರೀ ನಾರಾಯಣ ಗುರುರವರ ಹಾದಿಯನ್ನೇ ಬ್ರಹ್ಮಾನಂದ ಸ್ವಾಮೀಜಿ ಅನುಸರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಕೆ.ಸಂಜೀವ ಪೂಜಾರಿ ವಹಿಸಿದ್ದು, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಸೇಸಪ್ಪ ಮತ್ತಿತರರು ಉಪಸ್ಥಿತರಿದ್ದರು.

933bdf41-1e58-4bf7-8485-1b812964a7ec

ಇದಕ್ಕೂ ಮುನ್ನ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಪ್ರವೇಶ ಸಂದರ್ಭ ಅದ್ದೂರಿಯಾಗಿ ಸ್ವಾಗತಿಸಲಾಯಿತು.

By Suddi9

Leave a Reply

Your email address will not be published. Required fields are marked *